ಕಾಸರಗೋಡು: ಅಬಕಾರಿ ಹಾಗೂ ಮಾದಕ ದ್ರವ್ಯ ಸಾಗಾಟ ಪ್ರಕರಣಗಳಲ್ಲಿನ ವಾರಂಟ್ ಆರೋಪಿ, ನವ ವರ ಪೆರ್ಮುದೆ ಕುಡಾಲ್‍ಮೇರ್ಕಳ ಎಡಕ್ಕಾನ ನಿವಾಸಿ ವಿಷುಕುಮಾರ್ ಎಂಬಾತನನ್ನು ಆತನ ಪತ್ನಿ ಮನೆಯಿಂದ ಅಬಕಾರಿ ದಳ ಸಿಬ್ಬಂದಿ ಬಂಧಿಸಿದ್ದಾರೆ. ಅರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪತ್ನಿ ಮನೆಯೊಳಗಿನ ಮಂಚದ ಕೆಳಗೆ ಕಂಬಳಿಹೊದ್ದು ಅವಿತುಕೊಂಡಿದ್ದ ಈತನನ್ನು ಅಬಕಾರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.2019, 2021 ಹಾಗೂ 2023ರಲ್ಲಿ ಈತನ ವಿರುದ್ಧ ಅಬಕಾರಿ, ಎನ್‍ಡಿಪಿಎಸ್ ಪ್ರಕರಣ ದಾಖಲಾಗಿದ್ದು, ನಂತರ ತಲೆಮರೆಸಿಕೊಂಡಿದ್ದನು. ಇತ್ತೀಚೆಗೆ ಈತನ ವಿವಾಹ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಲಭ್ಯವಾದ ಸತಿಪತಿಯರ ಫೋಟೋ ಆಧರಿಸಿ ಅಬಕಾರಿ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

