HEALTH TIPS

ಏ. 27ರಂದು ಕನ್ನಡ ಭವನ ಗ್ರಂಥಾಲಯದಲ್ಲಿ ಬೇಕಲ ರಾಮ ನಾಯಕ ಸ್ಮರಣಾಂಜಲಿ ಕಾರ್ಯಕ್ರಮ

ಕಾಸರಗೋಡು: ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡಿನ ಜಿಲ್ಲಾ ಘಟಕದ ನೇತೃತ್ವದಲ್ಲಿ ಅಗ್ರಗಣ್ಯ ಸಾಹಿತಿ, ಇತಿಹಾಸ ಶಿಕ್ಷಕ ಮತ್ತು ಸಂಶೋಧಕರಾದ ಬೇಕಲ ರಾಮ ನಾಯಕರ ಬದುಕು - ಬರಹದ ಕುರಿತ ಸ್ಮರಣಾಂಜಲಿ ಕಾರ್ಯಕ್ರಮ ನಗರದ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ  ಮತ್ತು ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ  ಏ. 27ರಂದು ಮಧ್ಯಾಹ್ನ 2.30ಕ್ಕೆ ಜರುಗಲಿದೆ. ಕೊಡಗು ಜಿಲ್ಲಾ ಕನ್ನಡ ಭವನ,ಕೊಡಗು ಜಿಲ್ಲಾ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯುವುದು.

ಸಾಮಾಜಿಕ ಮುಖಂಡ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಸಮಾರಂಭ ಉದ್ಘಾಟಿಸುವರು. ಜಿಲ್ಲಾ ಘಟಕದ ಅಧ್ಯಕ್ಷ ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಅಧ್ಯಕ್ಷತೆ ವಹಿಸುವರು. ನಿವೃತ್ತ ಶಿಕ್ಷಕಿ ಶಾರದಾ ಮೊಳೆಯಾರ್ ಪ್ರಾಸ್ತಾವಿಕವಾಗಿ ಮಾತನಾಡುವರು. ಕವಿ, ಲೇಖಕ ಚಂದ್ರಹಾಸ ಎಂ ಬಿ ಚಿತ್ತಾರಿ ಅವರು ಸಂಸ್ಮರಣಾ ಭಾಷಣ ಮಾಡುವರು. ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ  ಸಂಶೋಧನಾ ವಿದ್ಯಾರ್ಥಿ ಸೋಮು ಎಸ್ ಹಿಪ್ಪರಗಿ, ಕೊಡಗು ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ, ಕಾಸರಗೋಡು ಜಿಲ್ಲಾ ರಾಮರಾಯ ಕ್ಷತ್ರಿಯ ಕೋಟೆಯಾರ್ ಸೇವಾ ಸಂಘದ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ, ಕಾಸರಗೋಡಿನ ನಿವೃತ್ತ ಉಪ ಜಿಲ್ಲಾಧಿಕಾರಿ ಶಶಿಧರ ಶೆಟ್ಟಿ, ಕೊಡಗು ಜಿಲ್ಲಾ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ರುಬೀನಾ ಎಂ ಎ, ಮುಖಂಡರಾದ ಚಂದನ್ ನಂದರಬೆಟ್ಟು, ಅರುಣ್. ಲೋಹಿತ್ ಎಂ ಆರ್. ವಿಶಾಲಾಕ್ಷ ಪುತ್ರಕಳ, ವಸಂತ ಕೆರೆಮನೆ, ವಿಜಯರಾಜ ಪುಣಿಂಚಿತ್ತಾಯ ಬೆಳ್ಳೂರು, ಶೇಖರ ಎಂ ದೇಲಂಪಾಡಿ, ಗಿರೀಶ್ ಪಿ ಎಂ ಚಿತ್ತಾರಿ, ಸುಭಾಷಿಣಿ ಚಂದ್ರ ಕನ್ನಟಿಪ್ಪಾರೆ, ಡಾ. ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೇಚರ್ ಭಾಗವಹಿಸುವರು.

ಈ ಸಂದರ್ಭ ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವಿದ್ಯಾರ್ಥಿಗಳಿಂದ ಜಾನಪದ ಸಮೂಹ ಗಾಯನ ಕಾರ್ಯಕ್ರಮ ನಡೆಯಲಿದೆ. ನಂತರ ಹಿರಿಯ ಸಾಹಿತಿ ಕೆ ನರಸಿಂಹ ಭಟ್ ಏತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯುವ ವಸಂತ ಚುಟುಕು ಕವಿಗೋಷ್ಠಿಯಲ್ಲಿ ಕಾಸರಗೋಡು ಹಾಗೂ ಕೊಡಗು ಜಿಲ್ಲೆಯ ಸುಮಾರು 21 ಕವಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪ್ರಥಮ ಚುಟುಕು ರಚನಾ ಸ್ಪರ್ಧೆಯಲ್ಲಿ ವಿಜೇತರಾದ ಅವನಿ ಎಂ ಬೆಳ್ಳೂರು, ಪೂಜ ಸಿ ಹೆಚ್ ದೇಲಂಪಾಡಿ,  ಕಾವ್ಯ ರಾವ್ ಕಾಸರಗೋಡು, ಗಾಯತ್ರಿ ಪಳ್ಳತ್ತಡ್ಕ, ವೈಶಾಲಿನಿ ಟಿ ಇವರಿಗೆ ಕಾಸರಗೋಡು ಜಿಲ್ಲಾ ಚುಟುಕು ಕಾವ್ಯ ಪ್ರಶಸ್ತಿ-2025 ನೀಡಿ ಗೌರವಿಸಲಾಗುವುದು. ಹಿರಿಯ ಪತ್ರಕರ್ತ ಪ್ರದೀಪ್ ಬೇಕಲ್ ಅವರಿಗೆ ಬೇಕಲ ರಾಮ ನಾಯಕ ಸಾಹಿತ್ಯ ಪ್ರಶಸ್ತಿ ಹಾಗೂ ಸಂಘಟಕ ಮಂಗಳೂರಿನ ಡಾ.ರವೀಂದ್ರ ಜೆಪ್ಪು ಅವರಿಗೆ ಬೇಕಲ ರಾಮ ನಾಯಕ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಸಂಧ್ಯಾರಾಣಿ ಟೀಚರ್ ನೇತೃತ್ವದ ಕನ್ನಡ ಭವನ ಪ್ರಕಾಶನದ 7ನೇ ಕೃತಿಯಾದ, ಕವಯತ್ರಿ ಮೇಘಾ ಶಿವರಾಜ್ ಕಾಸರಗೋಡು ಅವರ 'ಮೌನ ಮಾತಾದಾಗ' ಕವನ ಸಂಕಲನವನ್ನು ಡಾ. ರವೀಂದ್ರ ಜೆಪ್ದು ಬಿಡುಗಡೆ ಮಾಡುವರು. ಡಾ. ಕೊಳ್ಚಪ್ಪೆ ಗೋವಿಂದ ಭಟ್ ಕೃತಿ ಪರಿಚಯ ಮಾಡುವರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries