ಕಾಸರಗೋಡು: ನಗರದ ಆನೆಬಾಗಿಲು ಬಳಿ ನಿಗೂಢವಾಗಿ ಮೃತಪಟ್ಟ ಪಶ್ಚಿಮ ಬಂಗಾಳ ನಿವಾಸಿ, ಕೂಲಿಕಾರ್ಮಿಕ ಸುಶಾಂತ್ ರಾಯ್(28)ಸಾವಿಗೆ ಸಂಬಂಧಿಸಿ ಮತ್ತೊಬ್ಬ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ನಿವಾಸಿ, ಸಂಜಿತ್ ರಾಯ್(35)ಬಂಧಿತ. ನಗರ ಠಾಣೆ ಇನ್ಸ್‍ಪೆಕ್ಟರ್ ನಳಿನಾಕ್ಷನ್ ನೇತೃತ್ವದ ಪೊಲೀಸರ ತಂಡ ಈತನನ್ನು ಬಂಧಿಸಿದೆ. ಈತ ಕೊಲೆಗೀಡಾಗಿರುವ ಸುಶಾಂತ್ ರಾಯ್‍ನ ಸಮೀಪ ಸಂಬಂಧಿಯಾಗಿದ್ದಾನೆ.
ತಲೆಯ ಹಿಂಭಾಗಕ್ಕೆ ಯಾವುದೋ ವಸ್ತುವಿನಿಂದ ಬಲವಾಗಿ ಹೊಡೆದು ಉಂಟಾದ ಏಟಿನಿಂದ ಸಾವು ಸಂಭವಿಸಿರುವುದಾಗಿ ಪರಿಯಾರಂ ವೈದ್ಯಕೀಯ ಕಾಲೇಝು ಆಸ್ಪತ್ರೆಯಲ್ಲಿ ನಡೆಸಲಾದ ಶವಮಹಜರು ವರದಿ ತಿಳಿಸಿದೆ.
ಕ್ವಾಟ್ರಸ್‍ನಲ್ಲಿ ಒಟ್ಟು 14ಮಂದಿ ವಾಸಿಸುತ್ತಿದ್ದು, ಇವರಲ್ಲಿ ಇಬ್ಬರು ಕೇರಳೀಯರಾಗಿದ್ದು, ಉಳಿದವರು ಪಶ್ಚಿಮ ಬಂಗಾಳ ನಿವಾಸಿಗಳಾಗಿದ್ದಾರೆ. ಘಟನೆ ನಡೆದಂದು ಎಳು ಮಂದಿ ಮಾತ್ರ ಕ್ವಾಟ್ರಸ್‍ನಲ್ಲಿದ್ದರು. ಭಾನುವಾರ ತಡರಾತ್ರಿ ಇವರ ಮಧ್ಯೆ ಘರ್ಷಣೆ ನಡೆದಿದ್ದು, ಸುಶಾಂತ್ ರಾಯ್ ಮೃತಪಟ್ಟಿದ್ದನು. ಕ್ವಾಟ್ರಸ್‍ನಲ್ಲಿ ವಾಸಿಸುತ್ತಿರುವವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

