HEALTH TIPS

ಕಾಸರಗೋಡಲ್ಲಿ ಅನ್ಯರಾಜ್ಯ ಕಾರ್ಮಿಕನ ಬರ್ಬನ ಹತ್ಯೆ

ಕಾಸರಗೋಡು: ಕಾಸರಗೋಡಿನ ಆನೆಬಾಗಿಲುವಿನಲ್ಲಿರುವ ಅನ್ಯರಾಜ್ಯ ಕಾರ್ಮಿಕರ ವಸತಿ ನಿಲಯದಲ್ಲಿ ವಿವಾದ ಭುಗಿಲೆದ್ದಿದೆ. ಒಬ್ಬ ವ್ಯಕ್ತಿಯನ್ನು ಹೊಡೆದು ಹತ್ಯೆಗ್ಯೆಯ್ಯಲಾಗಿದೆ. ಸೋಮವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.  ಪಶ್ಚಿಮ ಬಂಗಾಳದ ನಿವಾಸಿ, ಕಾರ್ಮಿಕ  ಸುಶಾಂತ್ ರಾಯ್(28) ಮೃತ ವ್ಯಕ್ತಿ.

ಮಾಹಿತಿ ತಿಳಿದ ಕೂಡಲೇ ಕಾಸರಗೋಡು ನಗರ ಪೊಲೀಸರು ಸ್ಥಳಕ್ಕೆ ತಲುಪಿ 4 ಜನರನ್ನು ವಶಕ್ಕೆ ಪಡೆಯಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇತರ ರಾಜ್ಯಗಳ ಕಾರ್ಮಿಕರ ನಡುವಿನ ವಿವಾದವು ಕೊಲೆಗೆ ಕಾರಣ ಎಂದು ತಿಳಿದುಬಂದಿದೆ.

ಪೊಲೀಸರು ವಿಚಾರಣೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries