ಪಹಲ್ಗಾಮ್: 'ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ, ಮುಗ್ಧ ನಾಗರಿಕರನ್ನು ಹತ್ಯೆ ಮಾಡಿದ ಉಗ್ರರಿಗೆ ಕ್ಷಿಪ್ರ ಹಾಗೂ ತಕ್ಕ ಪ್ರತ್ಯುತ್ತರ ನೀಡಲಾಗುವುದು' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಶಪಥ ಮಾಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ಈ ದುಷ್ಕೃತ್ಯಕ್ಕೆ ಕಾರಣರಾದವರಿಗೆ ನಮ್ಮಿಂದ ಶೀಘ್ರವೇ ಸ್ಪಷ್ಟ ಉತ್ತರ ಸಿಗಲಿದೆ.
ಈ ದಾಳಿ ನಡೆಸಿದವರಿಗೆ ಮಾತ್ರವಲ್ಲ. ಇಲ್ಲಿಯೇ ಇದ್ದುಕೊಂಡು ತೆರೆಮರೆಯಲ್ಲಿಯೇ ಈ ದಾಳಿ ಯೋಜಿಸಿದವರಿಗೂ ಉತ್ತರ ನೀಡುತ್ತೇವೆ' ಎಂದು ಸಚಿವ ಸಿಂಗ್ ಹೇಳಿದ್ದಾರೆ.




