ಬದಿಯಡ್ಕ: ಚಿತ್ತವೃತ್ತಿ ನಿರೋಧಕವಾದ ಯೋಗ ಇಂದು ಬಹು ಆಯಾಮಗಳೊಂದಿಗೆ ವಿಶ್ವದಾದ್ಯಂತ ವ್ಯಾಪಿಸಿದೆ. ನಮ್ಮ ನಿತ್ಯ ಜೀವನದಲ್ಲಿ ಯೋಗ ಬದುಕಿನ ಭಾಗವಾದ ಬದುಕು ಸುಮಗೊಳ್ಳುತ್ತದೆ;ಒತ್ತಡ, ರೋಗ ರಹಿತ ಜೀವನ ಸಾಕಾರಗೊಳ್ಳುತ್ತದೆ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಯೋಗ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಸುಬ್ರಹ್ಮಣ್ಯ ಪ್ಯೆಲೂರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಯುವಜನ ಕ್ಷೇಮ ಮತ್ತು ಕ್ರೀಡಾ ಮಂತ್ರಾಲಯದ ಅಂಗೀಕಾರ ಇರುವ 'ಯೋಗಾಸನ ಭಾರತ' ಇದರ ಕೇರಳ ರಾಜ್ಯ ಘಟಕವಾದ ಯೋಗಾಸನ ಸ್ಪೋಟ್ರ್ಸ್ ಅಸೋಸಿಯೇóನ್ ಆಫ್ ಕೇರಳದ ಜಿಲ್ಲಾ ಘಟಕವಾದ 'ಯೋಗಾಸನ ಕಾಸರಗೋಡು' ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಶನಿವಾರ ಮತ್ತು ಭಾನುವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡ ಯೋಗ ಉತ್ಸವ 2025 ವಿನೂತನ ಕಾರ್ಯಕ್ರಮ ಶನಿವಾರ ಸಂಜೆ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಕ್ತಿ ಸಾಮಥ್ರ್ಯ-ವ್ಯಕ್ತಿತ್ವ, ಉತ್ತಮ ಆರೋಗ್ಯ, ಸಾಮಾಜಿಕ ಬದ್ಧತೆಗೆ ಯೋಗಾಭ್ಯಾಸ ಅತ್ಯುತ್ತಮವಾದುದು. ಇಂದು ಕ್ರೀಡಾ ಕ್ಷೇತ್ರದಲ್ಲೂ ಯೋಗ ಒಂದು ಸ್ಪರ್ಧಾ ವಿಷಯವಾಗಿ ಗಮನ ಸೆಳೆದಿದ್ದು, ಏಷ್ಯನ್ ಗೇಮ್ಸ್ ಹಾಗೂ ಇತರ ಅಂತಾರಾಷ್ಟ್ರ ಸ್ಪರ್ಧೆಗಳಲ್ಲಿ ಸ್ಥಾನ ಪಡೆಯಲಿದೆ ಎಂದವರು ತಿಳಿಸಿದರು.
ಉಚ್ವಾಸ-ನಿಶ್ಚಾಸ, ಆಹಾರ-ವಿಹಾರ ನಿಯಂತ್ರಣ ಮೊದಲಾದ ಜೀವನ ಕ್ರಮಗಳು ಇಂದಿನ ಹೊಸ ತಲೆಮಾರಿಗೆ ಅಗತ್ಯವಿದ್ದು ಈ ನಿಟ್ಟಿನಲ್ಲಿ ಯೋಗ ಶಿಕ್ಷಣದ ಪ್ರಸಾರ-ಪ್ರಚಾರದಲ್ಲಿ ಯೋಗಾಸನ ಕೇರಳ ಹಾಗೂ ಕಾಸರಗೋಡು ನಿತ್ಯ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಪೆರಿಯದ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಯೋಗಶಾಸ್ತ್ರದಲ್ಲಿ ಎಂ.ಎಸ್ಸಿ, ಪಿಎಚ್ಡಿ ಅಧ್ಯಯನ ಅವಕಾಶಗಳಿದ್ದು, ನೆಟ್ ಹಾಗೂ ಜೆ.ಆರ್.ಎಫ್. ಪದವಿಗಳಿಗೆ ಅವಕಾಶವಿದೆ ಎಂದವರು ಈ ಸಂದರ್ಭ ಮಾಹಿತಿ ನೀಡಿದರು.
ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ತಲಪಾಡಿ ಶ್ರೀಶಾರದಾ ವ್ಯೆದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಾಂಶುಪಾಲ ಡಾ.ಸಂದೀಪ್ ಬೇಕಲ್. ಆರ್. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಬದಿಯಡ್ಕ ಗ್ರಾ.ಪಂ.ಉಪಾಧ್ಯಕ್ಷ ಎಂ.ಅಬ್ಬಾಸ್, ಬ್ಲಾ.ಪಂ.ಸದಸ್ಯರಾದ ಸುಕುಮಾರ ಕುದ್ರೆಪ್ಪಾಡಿ, ಜಯಂತಿ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯ ಶಿವಪ್ರಸಾದ್, ಯೋಗಾಸನ ಕೇರಳ ರಾಜ್ಯ ಕಾರ್ಯದರ್ಶಿ ಶಾಮಿಲ್ ಮೋನ್ ಉಪಸ್ಥಿತರಿದ್ದರು.
ಯೋಗಾಸನ ಕಾಸರಗೋಡಿನ ಅಧ್ಯಕ್ಷ ರವಿಶಂಕರ ನೆಗಲಗುಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತೇಜಾಕುಮಾರಿ ಕಾಸರಗೋಡು ವಂದಿಸಿದರು. ಗಣೇಶ್ ಭಟ್ ಪೆರ್ವ ಹಾಗೂ ಡಾ.ವಿದ್ಯಾಲಕ್ಷ್ಮೀ ಬೇಳ ಕಾರ್ಯಕ್ರಮ ನಿರೂಪಿಸಿದರು.
ಎರಡು ದಿನಗಳ ವಿಸ್ಕøತ ಯೋಗೋತ್ಸವದಲ್ಲಿ ಆಹಾರ ಮೇಳ, ಮಕ್ಕಳ ಕ್ರಿಡಾ ಜಗತ್ತು, ವಸ್ತು ಪ್ರದರ್ಶನ, ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಮೊದಲು ಅಭಿಜ್ಞಾ ಕಾಸರಗೋಡು ಅವರಿಂದ ಯೋಗ ನೃತ್ಯ ಪ್ರದರ್ಶನ, ಶ್ರೀಲಕ್ಷೀ ಕುಳೂರು ಅವರಿಂದ ದಾರ-ಬಣ್ಣಗಳಿಂದ ಮಹಾಗಣಪತಿಯ ಚಿತ್ರ ರಚನೆ ವೇದಿಕೆಯಲ್ಲಿ ನಡೆಯಿತು.

.jpg)
.jpg)
.jpg)
