ನ್ಯೂಯಾರ್ಕ್/ವಾಷಿಂಗ್ಟನ್: 'ಕಾಶ್ಮೀರ ಸಮಸ್ಯೆಗೆ ಸಾವಿರ ವರ್ಷಗಳ ಬಳಿಕ ಪರಿಹಾರ ದೊರೆಯಬಹುದೇ ಎಂಬುದನ್ನು ನೋಡಲು ನಿಮ್ಮಿಬ್ಬರ ಜತೆಗೆ ನಾನು ಕೆಲಸ ಮಾಡುತ್ತೇನೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸೇನಾ ಸಂಘರ್ಷ ಶಮನಗೊಳಿಸಿ 'ಕದನ ವಿರಾಮ'ಕ್ಕೆ ತಲುಪಿದ್ದಕ್ಕಾಗಿ ಭಾರತ ಮತ್ತು ಪಾಕಿಸ್ತಾನವನ್ನು ಶ್ಲಾಘಿಸುತ್ತೇನೆ ಎಂದಿರುವ ಅವರು, ಉಭಯ ದೇಶಗಳ ನಾಯಕರನ್ನು ದೇವರು ಆಶೀರ್ವದಿಸಲಿ ಎಂದು 'ಟ್ರೂತ್'ನಲ್ಲಿ ಪೋಸ್ಟ್ ಮಾಡಿದ್ದಾರೆ.





