HEALTH TIPS

ಕನ್ನಡ ಭವನದ ಕನ್ನಡಪರ ಚಟುವಟಿಕೆ ಶ್ಲಾಘನೀಯ -ಪ್ರದೀಪ್ ಕುಮಾರ್ ಕಲ್ಕೂರ.

ಕಾಸರಗೋಡು: ಕನ್ನಡ ಭವನದ ಕನ್ನಡಪರ ಚಟುವಟಿಕೆಗಳು ಅನುಕರಣೀಯ ಹಾಗೂ ಶ್ಲಾಘನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದ್ದಾರೆ. 

ಅವರು ಮಂಗಳೂರು ತಾಲೂಕು ಮಹಿಳಾ ಒಕ್ಕೂಟ ಸಭಾ ಭವನದಲ್ಲಿ ಡಾ. ವಾಮನ್ ರಾವ್ ಸಾರಥ್ರ್ಯದ ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯದ ದಕ್ಷಿಣ ಕನ್ನಡ ಜಿಲ್ಲಾ ಘಟಕವನ್ನು ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷೆ ರೇಖಾ ಸುದೇಶ್ ರಾವ್ ಅವರಿಗೆ ಕನ್ನಡ ಧ್ವಜ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.  ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿ ಉಳಿಸುವ, ಬೆಳೆಸುವ ಕೆಲಸವನ್ನು ಕನ್ನಡ ಭವನದೊಂದಿಗೆ ಕೈಜೋಡಿಸಿ ಮುನ್ನಡೆಸಲು ದಕ್ಷಿಣ ಕನ್ನಡ ಜಿಲ್ಲೆಯ ನಮ್ಮೆಲ್ಲರ ಸಂಪೂರ್ಣ ಬೆಂಬಲವಿರಲಿದೆ ಎಂದು ತಿಳಿಸಿದರು. 


ದ. ಕ. ಜಿಲ್ಲಾ ಗೌರವಾಧ್ಯಕ್ಷ ಡಾ. ರವೀಂದ್ರ ಜೆಪ್ಪು ದೀಪ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.  ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು. ಡಾ. ಉದಯಕುಮಾರ್,  ವಿಧಾನಸಭಾ ಮಾಜಿ ಸಚೇತಕರಾದ ಕ್ಯಾ. ಗಣೇಶ್ ಕಾರ್ಣಿಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಕೊಳಚಪ್ಪೆ ಗೋವಿಂದ ಭಟ್, ಓಜಸ್ ಸಂಸ್ಥೆ ಅಧ್ಯಕ್ಷ ಮಂಗಳಾ ಎನ್. ಕೆ,  ಕರ್ನಾಟಕ ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, ರಾಷ್ಟ್ರೀಯ ಸಾಂಸ್ಕ್ರಥಿಕ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಗಂಗಾಧರ್ ಗಾಂಧಿ,   ಡಾ. ಮಾಲತಿ ಶೆಟ್ಟಿ ಮಾನೂರ್, ಪ್ರಕಾಶ್ ಚಂದ್ರ ಉಳ್ಳಾಲ, ಶೋಭಾ ಲೋಕೇಶ್, ಚಂದ್ರಕಾಂತ್ ಉಪಸ್ಥಿತರಿದ್ದರು. ಈ ಸಂದರ್ಭ ಹಿರಿಯ ಸಾಹಿತಿ ಡಾ. ಶಿವಾನಂದ ಬೇಕಲ್ ಹಾಗೂ ಕ್ಯಾ. ಗಣೇಶ್ ಕಾರ್ಣಿಕ್ ಅವರಿಗೆ "ರಾಷ್ಟ್ರ ಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ 2025."ನೀಡಿ ಗೌರವಿಸಲಾಯಿತು.

ನಾಡೋಜ ಡಾ. ಕೃಷ್ಣಪ್ರಸಾದ್ ನೇತ್ರಾಲಯ, ಜೆ. ಕೆ. ರಾವ್ ಮಂಗಳೂರು, ಯೋಗೀಶ್ ಕುಮಾರ್ ಜೆಪ್ಪು, ಡಾ. ಉದಯಕುಮಾರ್, ಡಾ. ಮಂಜುಳಾ ಅನಿಲ್ ರಾವ್, ಡಾ. ಕೆ. ವಿ. ದೇವಪ್ಪ ಅವರಿಗೆ ಕನ್ನಡ ಭವನದ ಪ್ರತಿಷ್ಠಿತ "ಸಮಾಜ ಸೇವಾ ರತ್ನ ಪ್ರಶಸ್ತಿ-2025'ನೀಡಲಾಯಿತು.

ರತ್ನಾ ಟೀಚರ್, ಜೋಗಟ್ಟೆ, ಶಾರದಾ ಮೊಳೆಯಾರ್, ಜೋಸ್ನಾ ನುಳ್ಳಿಪ್ಪಾಡಿ, ಮಂಗಳೂರು, ಜನಾರ್ದನ್ ಎಚ್ ಎಸ್,ಮಂಜುನಾಥ್ ಕೆ ಬೈಲೂರ್, ರಾಜನ್ ಮುನಿಯೂರ್, ಪ್ರವೀಣ್ ಕುಲಕರ್ಣಿ ಬಿದಿಗೆಚಂದ್ರ, ಶರಣ್ ಬೇಕಲ್ ಇವರೀಗೆ ಕನ್ನಡ ಭವನದ "ಕನ್ನಡ ಪಯಸ್ವಿನಿ ಪ್ರಶಸ್ತಿ "ನೀಡಿ ಪುರಸ್ಕಾರಿಸಲಾಯಿತು.

ಎಶಿಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸಿ,"ನ್ಯೂ ಎಶಿಯನ್ ಚಾಂಪಿಯನ್ ಶಿಪ್ ಪಡೆದ ಕುಮಾರಿ ನಾಗಶ್ರೀ ಗಣೇಶ್ ಉಪ್ಪಿನಕುದ್ರು ಇವರೀಗೆ ವಿಶೇಷ ಸನ್ಮಾನದೊಂದಿಗೆ ದಿ. ಲೈಟ್ ಒಫ್ ಹೋಪ್ಸ್ -ಅಚೀವ್ಮೆಂಟ್ ಅವಾರ್ಡ್ ನೀಡಿ ಗೌರವಿಸಲಾಯಿತು.

ವಿವಿಧ ವಿಭಾಗಗಳಲ್ಲಿ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮೆರೆದ, ಕೃತಿ ಬೇಕಲ್, ಜ್ಞಾನೇಶ್ ಬೇಕಲ್, ಐಶ್ವರ್ಯ ಆರ್, ಇಂಚರ, ಕೃತಿ, ಮನೀಶ್ ರಾವ್ ಆರ್. ಬಿ. ಹವೀಶ್ ಆರ್, ಗಣೇಶ್ ರಾಜ್ ಕೆ. ಎಂ. ಡ್ಯಾಫ್ನ ಕೆ. ವಿ., ದ್ಯಾನ್ ಮದ್ದೋಡಿ, ದೀಕ್ಷಿತಾ ವಿ., ಭುವಿ, ನಿತ್ಯ, ಶಿವಾನಿ ದಿನೇಶ್ ರಾವ್, ಕು. ಮಾನ್ಯ, ಸಾಗರಿ ಎಸ್, ನಿನಾದ, ದೀಕ್ಷಾ, ಡಿ. ರಾವ್, ಸುಪ್ರೀತಾ ರಾವ್ ಬಿ., ಸಾತ್ವಿಕ್ ಕೆ. ಸಾನ್ವಿ ಗುರುಪುರ, ಸಾಕ್ಷಿ, ಸಾದ್ವಿನಿ, ವೈಷ್ಣವಿ ವಿ. ಬೇಕಲ್, ವೈಶಾಕ್ ಕುಮಾರ್, ತನುಷ್ ಕೆ., ಸ್ವಸ್ತಿಕ್ ಆರ್, ಯಕ್ಷತ್ ಶೆಟ್ಟಿ, ಚಿರಸ್ವಿ ಕೆ. ಜಿ., ಶ್ರೇಯ ಕೃಷ್ಣ, ಇವರುಗಳಿಗೆ ಕನ್ನಡ ಭವನದ ಯುವ ಪ್ರತಿಭಾ ಪ್ರಶಸ್ತಿಯಾದ "ಭರವಸೆಯ ಬೆಳಕು'ಪ್ರಶಸ್ತಿ ನೀಡಿ ಪುರಸ್ಕಾರಿಸಲಾಯಿತು.

ಪ್ರದೀಪ್ ಬೇಕಲ್ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವೈಶಾಕ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ರಾವ್ ಕುಂಬ್ಳೆ ವಂದಿಸಿದರು. ಕಾರ್ಯಕ್ರಮ ದ ಅಂಗವಾಗಿ ಡಾ. ವಾಣಿಶ್ರೀ ಕಾಸರಗೋಡು ನೆತ್ರಿತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಯ ಕಲಾವಿದರ ನೃತ್ಯ, ಗಾನ ವೈಭವ ಕಾರ್ಯಕ್ರಮ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries