ಬದಿಯಡ್ಕ: ಸೀಮೆಯ ನೆಲಮೂಲದ ಕಲೆ ಯಕ್ಷಗಾನವನ್ನು ಈ ನೆಲದಲ್ಲಿ ಹೊಸ ತಲೆಮಾರಿಗೆ ಕೈದಾಟಿಸಿ, ಹೊಸ ಪೀಳಿಗೆಗೂ ನೆಲದ ಸಂಸ್ಕøತಿ ಪ್ರೇಮ ಮೂಡಿಸಿ ಮಾನ್ಯ ಪರಿಸರದಲ್ಲಿ ಯಕ್ಷಗಾನಾಭಿರುಚಿಯ ಬೀಜ ಬಿತ್ತಿ, ಕಲಾಪ್ರೀತಿಯ ವೃಕ್ಷ ಬೆಳೆಸುವಲ್ಲಿ 'ಯಕ್ಷ ಮಿತ್ರರು ಮಾನ್ಯ' ನೀಡಿದ ಕೊಡುಗೆ ಶ್ಲಾಘನೀಯ ಎಂದು ಶ್ರೀ ಮದೆಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ನುಡಿದರು.
'ಯಕ್ಷ ಮಿತ್ರರು ಮಾನ್ಯ' ಸಂಸ್ಥೆಯ ಶನಿವಾರ ರಾತ್ರಿ ನಡೆದ 24ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಶ್ರೀಗಳವರು ಆಶೀರ್ವಚನ ನೀಡಿದರು.
ವಾರ್ಷಿಕೋತ್ಸವದ ಅಂಗವಾಗಿ ಹನುಮಗಿರಿ ಮೇಳದ ಪ್ರಸಿದ್ದ ಕಲಾವಿದರಾದ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಸಂತೋಷ್ ಕುಮಾರ್ ಹಿಲಿಯಾಣ ಅವರನ್ನು ದಂಪತಿ ಸಹಿತ ಗೌರವಿಸಲಾಯಿತು. ಅರ್ಥಧಾರಿ ಹರೀಶ ಬಳಂತಿಮೊಗರು ಅಭಿನಂದನಾ ಭಾಷಣ ಮಾಡಿದರು.
ಯಕ್ಷಮಿತ್ರರು ವತಿಯಿಂದ ನಿಧಿ ಸಂಚಯನಕ್ಕಾಗಿ 'ಯಕ್ಷನಿಧಿ' ಯೋಜನೆ ರೂಪಿಸಲಾಗಿದ್ದು, ವಾರ್ಷಿಕೋತ್ಸವದಲ್ಲಿ ಎಡನೀರು ಶ್ರೀಗಳವರು ಯಕ್ಷನಿಧಿ ಸಂಚಯನ ಯೋಜನೆ ಉದ್ಘಾಟಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಚಿತ್ರಾ ವಿಜಯಕುಮಾರ್, ಹರ್ಷಿತಾ ಪುರುಷೋತ್ತಮ, ಶಾಲಿನಿ ಮಹೇಶ್ ಸಮ್ಮಾನ ಪತ್ರ ವಾಚಿಸಿದರು. ನಿತ್ಯಾನಂದ ಮಾನ್ಯ, ರಾಮ ಕಾರ್ಮಾರು, ಸೂರ್ಯ ಮಾನ್ಯ, ಪುರುಷೋತ್ತಮ, ಮಹೇಶ್ ಸಹಕರಿಸಿದರು. ಸಂತೋಷ್ ಕುಮಾರ್ ಮಾನ್ಯ ನಿರೂಪಿಸಿದರು. ವಿಜಯ ಕುಮಾರ್ ವಂದಿಸಿದರು. ಪೆಹಲ್ಯಾಮ್ ಆಕ್ರಮಣ ಮತ್ತು ಗಡಿ ಉದ್ವಿಗ್ನತೆಯಲ್ಲಿ ಬಲಿದಾನಿಗಳಾದ ಭಾರತೀಯ ಪೌರರ ವಿಯೋಗಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಾರ್ಷಿಕೋತ್ಸವದಂಗವಾಗಿ ಹನುಮಗಿರಿ ಮೇಳದ 'ಸಾಕೇತ ಸಾಮ್ರಾಜ್ಞೆ'ಯ 88ನೇ ಪ್ರದರ್ಶನ ಮಾನ್ಯದ ಪ್ರೇಕ್ಷಕರನ್ನು ಮುದಗೊಳಿಸಿತು.

.jpg)
