ಕಾಸರಗೋಡು: ಬಿಜೆಪಿ ಉದುಮ ಪಂಚಾಯಿತಿ ಮಟ್ಟದ ಕಾರ್ಯಕರ್ತರಿಗಾಗಿ ಕಾರ್ಯಾಗಾರ ಉದುಮ ಪಂಚಾಯಿತಿ ಸಮಿತಿ ಕಚೇರಿಯಲ್ಲಿ ಆಯೋಜಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಬಾಬುರಾಜ್ ಸಮಾರಂಭ ಉದ್ಘಾಟಿಸಿದರು.
ಬಿಜೆಪಿ ಉದುಮ ಪಂಚಾಯಿತಿ ಸಮಿತಿ ಅಧ್ಯಕ್ಷ ವಿನಿಲ್ ಮುಳ್ಳಚೇರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಎನ್.ಮಧು ತರಗತಿ ನಡೆಸಿದರು. ಜಿಲ್ಲಾ ಮಾಧ್ಯಮ ಸಂಚಾಲಕ ವೈ.ಕೃಷ್ಣದಾಸ್, ಉದುಮ ಮಂಡಲ ಸಮಿತಿ ಅಧ್ಯಕ್ಷೆ ಶೈನಿಮೋಳ್, ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ಕುಮಾರ್ ಎಂ.ಕೂಟಕ್ಕಣಿ, ಎ.ಎಂ. ಮುರಳೀಧರನ್, ಉಪಾಧ್ಯಕ್ಷ ತಂಬಾನ್ ಅಚ್ಚೇರಿ, ಕಾರ್ಯದರ್ಶಿ ಶ್ಯಾಮ್ ಕಾಶಿ ಉಪಸ್ಥಿತರಿದ್ದರು. ಬಾಬು ಪರಿಯಾರಂ ಸ್ವಾಗತಿಸಿದರು. ದಿನೇಸನ್ ಚೇಕ್ಲಿ ವಂದಿಸಿದರು.



