ಕಾಸರಗೋಡು: ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ, ಸಿಪಿಎಂ ಮುಖಂಡ ಕೆ. ಮಣಿಕಂಠನ್ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಧ್ಯಕ್ಷ ಸ್ಥಾನದ ಜತೆಗೆ ಬ್ಲಾಕ್ ಪಂಚಾಯಿತಿ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದು, ರಾಜೀನಾಮೆ ಪತ್ರವನ್ನು ಬ್ಲಾಕ್ ಪಂಚಾಯಿತಿ ಕಾರ್ಯದರ್ಶಿಗೆ ಮಣಿಕಂಠನ್ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿಗರಾಗಿದ್ದ ಪೆರಿಯದ ಕೃಪೇಶ್ ಹಾಗೂ ಶರತ್‍ಲಾಲ್ ಕೊಲೆ ಪ್ರಕರಣದಲ್ಲ ಮಣಿಕಂಠನ್ 14ನೇ ಆರೋಪಿಯಾಗಿದ್ದು, ಸಇಬಿಐ ನ್ಯಾಯಾಲಯ ಇವರನ್ನು ಐದು ವರ್ಷಗಳ ಕಾಲ ಶಿಕ್ಷೆಗೆ ಒಳಪಡಿಸಿದ್ದು, ನಂತರ ಹೈಕೋರ್ಟಿನಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. 2019 ಫೆ. 17ರಂದು ಪೆರಿಯದ ಅವಳಿ ಕೊಲೆ ನಡೆದಿತ್ತು.
ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಮಣಿಕಂಠನ್ ಅವರ ಸದಸ್ಯತ್ವ ರದ್ದುಪಡಿಸುವಂತೆ ಬ್ಲಾಕ್ ಪಂಚಾಯಿತಿ ಸದಸ್ಯ, ಕಾಂಗ್ರೆಸ್‍ನ ಎಂಕೆ ಬಾಬುರಾಜ್ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಇದರ ಅಂತಿಮ ವಾದ ಜೂ. 26ರಂದು ನಡೆಯಲಿರುವ ಮಧ್ಯೆ ಅಧ್ಯಕ್ಷ ಸ್ಥಾನ ಹಾಗೂ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಅವಳಿ ಕೊಲೆ ಪ್ರಕರಣ ನಡೆದಿದ್ದ ಸಂದರ್ಭ ಮಣಿಕಂಠ ಅವರು ಸಿಪಿಎಂ ಉದುಮ ಏರಿಯ ಸಮಿತಿ ಕಾರ್ಯದರ್ಶಿಯಾಗಿದ್ದರು. ಅವಳಿ ಕೊಲೆ ಪ್ರಕರಣದ ಆರೋಪಿಗಳನ್ನು ಅಂದು ಪೊಲೀಸ್ ವಶದಿಂದ ಬಲಪ್ರಯೋಗಿಸಿ ಕರೆದೊಯ್ದಿರುವ ಬಗ್ಗೆ ಮಣಿಕಂಠನ್ ಹಾಗೂ ಉದುಮ ಮಾಜಿ ಶಾಸಕ ಕೆ.ವಿ ಕುಞÂರಾಮನ್ ಸೇರಿದಂತೆ ಹಲವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.


