ಮಂಜೇಶ್ವರ: ಕಳೆದ ನಾಲ್ಕು ದಿವಸಗಳಿಂದ ನಡೆದುಬರುತ್ತಿದ್ದ ಮಂಜೇಶ್ವರ ಮಳ್‍ಹರ್ ಶಿಲ್ಪಿ, ಮುಹಮ್ಮದ್ ಉಮರುಲ್ ಫಾರೂಕ್ ಅಲ್ ಬುಖಾರಿ ಅವರ 10ನೇ ಉರುಸ್ ಮುಬಾರಕ್, ಆಧ್ಯಾತ್ಮಿಕ ಸಮಾವೇಶದೊಂದಿಗೆ ಭಾನುವಾರ ಸಂಪನ್ನಗೊಂಡಿತು. ಉರುಸ್ ಸಮಾರೋಪ ಅಂಗವಾಗಿ ನೂರಾರುಮಂದಿಗೆ ತುಪ್ಪದ ಅನ್ನದ ವಿತರಣೆ ನಡೆಯಿತು. ಈ ಸಂದರ್ಭ ವಿಜ್ಞಾನ, ಆಧ್ಯಾತ್ಮಿಕ ಮತ್ತು ಸಾಂಸ್ಕøತಿಕ ಸಂಗಮ ಮತ್ತು ಪದವಿಪ್ರದಾನ ಸಮಾರಂಭ ಆಯೋಜಿಸಲಾಘಿತ್ತು. ಪ್ರಮುಖ ವಿದ್ವಾಂಸರು ಮತ್ತು ಸಯ್ಯಿದ್‍ಗಳು ವಿವಿಧ ಸಮಾರಂಭಗಳ ನೇತೃತ್ವ ವಹಿಸಿದ್ದರು.
ಸಮಾರೋಪ ಸಮ್ಮೇಳನವನ್ನು ಸಮಸ್ತ ಅಧ್ಯಕ್ಷ ರಯೀಸುಲ್ ಉಲಮಾ ಇ ಸುಲೈಮಾನ್ ಮುಸ್ಲಿಯಾರ್ ಉದ್ಘಾಟಿಸಿದರು. ಭಾರತೀಯ ಮಹಾ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಪದವಿ ಪ್ರದಾನ ಭಾಷಣ ಮಾಡಿದರು. ಇದಕ್ಕೂ ಮೊದಲು ನಡೆದ ನಡೆದ ಆಧ್ಯಾತ್ಮಿಕ ಕೂಟಕ್ಕೆ ಮಳ್‍ಹರ್ ಅಧ್ಯಕ್ಷ ಸೈಯದ್ ಅಬ್ದುಲ್‍ರಹ್ಮಾನ್ ಶಾಹೀರ್ ಅಲ್-ಬುಖಾರಿ ನೇತೃತ್ವ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸಯ್ಯದ್ ಜಲಾಲುದ್ದೀನ್ ಅಲ್-ಬುಖಾರಿ ಮುಖ್ಯ ಭಾಷಣ ಮಾಡಿದರು. ಸೈಯದ್ ಜಲಾಲುದ್ದೀನ್ ಅಲ್-ಹಾದಿ ಉಜಿರೆ, ಸೈಯದ್ ಸೀದಿಕುಞÂ ಹಾಜಿ ತಙಳ್ ಮೊಗ್ರಾಲ್ ಪುತ್ತೂರು, ಸೈಯದ್ ಮುಸ್ತಫಾ ಸಿದ್ದಿಕಿ ಮಂಬುರಂ, ಪೆÇ್ರಫೆಸರ್ ಸಲೇಹ್ ಸಅದಿ ತಳಿಪರಂಬ, ಮುಸಲ್ ಮದನಿ ಅಲ್ ಬಿಶಾರ, ಜಕರಿಯ್ಯ ಫೈಝಿ, ಮುಹಮ್ಮದ್ ಸಖಾಫಿ ಪಾತೂರು, ಚಿಯೂರ್ ಅಬ್ದುಲ್ಲಾ ಸಅದಿ, ಉಮರುಲ್ ಫಾರೂಕ್ ಮದನಿ ಮಚ್ಚಂಪಾಡಿ, ಯೂಸುಫ್ ಸಅದಿ ಅಯ್ಯಂಗೇರಿ ಮೊದಲಾದವರು ಭಾಗವಹಿಸಿದ್ದರು.


