HEALTH TIPS

ಖಾಸಗಿ ವಾಹನಗಳಿಗೆ ₹3,000ಕ್ಕೆ FASTag ವಾರ್ಷಿಕ ಪಾಸ್; ಆ. 15ರಿಂದ: ಸಚಿವ ಗಡ್ಕರಿ

ನವದೆಹಲಿ: 'ಅಡೆತಡೆಗಳಿಲ್ಲದ ಹೆದ್ದಾರಿ ಸಂಚಾರಕ್ಕಾಗಿ ಖಾಸಗಿ ವಾಹನಗಳಿಗೆ ₹3 ಸಾವಿರಕ್ಕೆ ಫಾಸ್‌ಟ್ಯಾಗ್‌ ವಾರ್ಷಿಕ ಪಾಸ್‌ ವಿತರಿಸುವ ಯೋಜನೆ ಆ. 15ರಿಂದ ಜಾರಿಗೆ ಬರಲಿದೆ' ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, 'ಈ ವಾರ್ಷಿಕ ಪಾಸ್‌ ಒಂದು ವರ್ಷದ ಅವಧಿ ಅಥವಾ 200 ಟ್ರಿಪ್‌ಗಳಿಗೆ ಅನ್ವಯಿಸಲಿದೆ.

ಇದನ್ನು ವಾಣಿಜ್ಯ ಉದ್ದೇಶಕ್ಕಲ್ಲದ ವಾಹನಗಳಿಗೆ ಮಾತ್ರ ವಿತರಿಸಲಾಗುವುದು. ಇದರಲ್ಲಿ ಕಾರು, ಜೀಪು ಮತ್ತು ವ್ಯಾನ್‌ಗಳು ಸೇರುತ್ತವೆ' ಎಂದಿದ್ದಾರೆ.

'ಈ ವಾರ್ಷಿಕ ಪಾಸ್‌ ಪಡೆದು ದೇಶದ ಉದ್ದಗಲದ ಯಾವುದೇ ಹೆದ್ದಾರಿಯಲ್ಲಿ ಮುಕ್ತವಾಗಿ ಸಂಚರಿಸಬಹುದು. ಹೊಸ ಪಾಸ್ ಪಡೆಯುವ ಅಥವಾ ನವೀಕರಿಸುವ ಸೌಲಭ್ಯವು ಶೀಘ್ರದಲ್ಲಿ ರಾಜ್‌ಮಾರ್ಗ್ ಯಾತ್ರಾ ಆಯಪ್‌ನಲ್ಲಿ ಲಭ್ಯ. ಇದರೊಂದಿಗೆ NHAI ಮತ್ತು MoRTH ಅಂತರ್ಜಾಲ ಪುಟಗಳಲ್ಲೂ ಲಭ್ಯ' ಎಂದು ತಿಳಿಸಿದ್ದಾರೆ.

'60 ಕಿ.ಮೀ. ವ್ಯಾಪ್ತಿಯಲ್ಲಿನ ಟೋಲ್‌ ಪ್ಲಾಜಾಗಳು ಮತ್ತು ಟೋಲ್‌ ಪಾವತಿಯನ್ನು ಸರಳೀಕರಿಸುವ ಬಹುದಿನಗಳ ಬೇಡಿಕೆಯನ್ನು ಈ ಯೋಜನೆ ಮೂಲಕ ಈಡೇರಿಸಲಾಗುತ್ತಿದೆ. ಇದರಿಂದ ಕಾಯುವ ಸಮಯ ತಗ್ಗಲಿದೆ. ಒತ್ತಡ ಮತ್ತು ಟೋಲ್‌ ಸಿಬ್ಬಂದಿಯೊಂದಿಗಿನ ಅನಗತ್ಯ ವಿವಾದ ತಪ್ಪಿಸಲಿದೆ. ವಾರ್ಷಿಕ ಪಾಸ್ ಮೂಲಕ ಸಂಚಾರ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ. ಆರಾಮದಾಯಕ ಅನುಭವ ಖಾಸಗಿ ವಾಹನ ಮಾಲೀಕರದ್ದಾಗಲಿದೆ' ಎಂದು ಗಡ್ಕರಿ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries