HEALTH TIPS

ಲೈಬೀರಿಯಾದ ಹಡಗು ವಶಕ್ಕೆ ಪಡೆಯಲು ಕೋರ್ಟ್ ಆದೇಶ

ಕೊಚ್ಚಿ: ಲೈಬೀರಿಯಾದ ಎಂಎಸ್‌ಸಿ ಪೋಲೊ-2 ಹಡಗಿನ ಮಾಲೀಕತ್ವ ಹೊಂದಿರುವ ಸಂಸ್ಥೆಯು ₹73.49 ಲಕ್ಷ ಠೇವಣಿ ಇಡುವವರೆಗೆ ಅದನ್ನು ವಶಕ್ಕೆ ಪಡೆಯುವಂತೆ ಕೇರಳ ಹೈಕೋರ್ಟ್‌ ಬುಧವಾರ ಷರತ್ತುಬದ್ಧ ಆದೇಶ ಹೊರಡಿಸಿದೆ.

ಕೇರಳದ ಕರಾವಳಿಯಲ್ಲಿ ಎಂಎಸ್‌ಸಿ ಎಲ್ಸಾ-3 ಸರಕು ತುಂಬಿದ್ದ ಹಡಗು ಮುಳುಗಡೆ ಆಗಿದ್ದರಿಂದ ಉಂಟಾದ ನಷ್ಟವನ್ನು ಭರ್ತಿ ಮಾಡಲು ನ್ಯಾಯಾಲಯವು ಈ ಆದೇಶ ನೀಡಿದೆ.

ಕೇರಳ ಮೂಲದ ಗೋಡಂಬಿ ಕಂಪೆನಿಯು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಎ.ಅಬ್ದುಲ್‌ ಹಖೀಮ್‌ ಅವರು ಈ ಆದೇಶ ಹೊರಡಿಸಿದರು.

ಎಂಎಸ್‌ಸಿ ಎಲ್ಸಾ ಹಡಗು ಮೇ 25ರಂದು ಮುಳುಗಡೆಯಾದ ಕಾರಣ ಹಡಗಿನ ಕಂಟೈನರ್‌ನಲ್ಲಿದ್ದ ಗೋಡಂಬಿಯು ನಷ್ಟವಾಗಿದೆ ಎಂದು ಕಂಪೆನಿಯು ಆರೋಪಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries