ಕುಂಬಳೆ: ಪುತ್ತಿಗೆ ಗ್ರಾಮ ಪಂಚಾಯತಿಗೊಳಪಟ್ಟ ಸಂಟನಡ್ಕ ಪ್ರದೇಶದಲ್ಲಿ ಗುಡ್ಡವೊಂದು ವ್ಯಾಪಕವಾಗಿ ಕುಸಿಯುತ್ತಿದ್ದು ಕೃಷಿ ನಾಶನಷ್ಟ ಸಂಭವಿಸಿದೆ. ಇಲ್ಲಿನ ಕಲ್ಲಡ್ಕ ಸುಬ್ಬ ನಾಯ್ಕ, ರಸಾಕ್ ಮೊದಲಾದವರಿಗೆ ಸೇರಿದ ತೋಟಕ್ಕೆ ಗುಡ್ಡ ಕುಸಿತದಿಂದ ಹಾನಿ ಉಂಟಾಗಿದೆ.
ಬೃಹತ್ ಆಕಾರದ ಕಲ್ಲುಗಳು ಮಣ್ಣು ಸಹಿತ ಕುಸಿದಿದ್ದು ಗುಡ್ಡದ ಕೆಳಭಾಗದಲ್ಲಿರುವ ತೋಟಗಳು ಹೆಚ್ಚು ಹಾನಿಗೀಡಾಗಿದೆ ಎಂದು ತಿಳಿದು ಬಂದಿದೆ. ಸುಮಾರು 30 ಸೆಂಟ್ಸ್ ಸ್ಥಳದಲ್ಲಿದ್ದ ಅಡಿಕೆ ಹಾಗೂ ತೆಂಗಿನ ಮರಗಳು ಈ ಕುಸಿತದಿಂದ ಹಾನಿಗೀಡಾಗಿದೆ. ಮಳೆ ಅಧಿಕಗೊಂಡಿರುವಾಗ ಕುಸಿತ ತೀವ್ರಗೊಂಡಿದ್ದು ಇದೀಗಲೂ ಮುಂದುವರಿಯುತ್ತಿದ್ದು ಇಲ್ಲಿನ ಪ್ರದೇಶ ನಿವಾಸಿಗಳು ಆತಂಕಿತರಾಗಿದ್ದಾರೆ.




.jpg)
.jpg)

