ತಿರುವನಂತಪುರಂ: ಕಳೆದ ಐದು ವರ್ಷಗಳಲ್ಲಿ ಕೇರಳದಲ್ಲಿ ಕೃಷಿ ಕ್ಷೇತ್ರದಲ್ಲಿ ಭಾರಿ ಪ್ರಗತಿ ಕಂಡುಬಂದಿದೆ ಎಂದು ಸಮೀಕ್ಷಾ ವರದಿಯೊಂದು ಹೇಳುತ್ತದೆ. ರೈತ ಕುಟುಂಬಗಳ ಸರಾಸರಿ ಮಾಸಿಕ ಆದಾಯದಲ್ಲಿ ಶೇ. 61.79 ರಷ್ಟು ಹೆಚ್ಚಳವಾಗಿದೆ.
ಆರ್ಥಿಕ ಅಂಕಿಅಂಶಗಳ ಇಲಾಖೆಯ ಸಮೀಕ್ಷಾ ವರದಿಯು ಕೃಷಿಯಿಂದ ಜೀವನ ಸಾಗಿಸುವವರ ಮಾಸಿಕ ಆದಾಯವು ರೂ. 28,984 ಕ್ಕೆ ಏರಿದೆ ಎಂದು ಹೇಳುತ್ತದೆ.
ಪ್ರಸ್ತುತ ಅಂದಾಜಿನ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ 19.47 ಲಕ್ಷ ರೈತ ಕುಟುಂಬಗಳಿವೆ. ಇವುಗಳಲ್ಲಿ ಶೇ. 4.88 ರಷ್ಟು ಪರಿಶಿಷ್ಟ ಜಾತಿಗಳು, ಶೇ. 2.75 ರಷ್ಟು ಪರಿಶಿಷ್ಟ ಪಂಗಡಗಳು, ಶೇ. 45.42 ರಷ್ಟು ಹಿಂದುಳಿದ ವರ್ಗಗಳು ಮತ್ತು ಶೇ. 46.95 ರಷ್ಟು ಸಾಮಾನ್ಯ ವರ್ಗಕ್ಕೆ ಸೇರಿದ ಕುಟುಂಬಗಳಿವೆ.
ಶೇ. 32.04 ರಷ್ಟು ಕುಟುಂಬಗಳ ಮುಖ್ಯ ಆದಾಯದ ಮೂಲ ಕೃಷಿಯಾಗಿದೆ. ಪ್ರತಿ 1000 ರೈತ ಕುಟುಂಬಗಳಲ್ಲಿ 990 ಕುಟುಂಬಗಳು ಬ್ಯಾಂಕ್ ಖಾತೆಗಳನ್ನು ಹೊಂದಿವೆ ಮತ್ತು 140 ಕುಟುಂಬಗಳು ಕಿಸಾನ್ ಕ್ರೆಡಿಟ್ ಕಾರ್ಡ್‍ಗಳನ್ನು ಹೊಂದಿವೆ.
1000 ಕುಟುಂಬಗಳಲ್ಲಿ 415 ಕುಟುಂಬಗಳು ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಕಾರ್ಡ್‍ಗಳನ್ನು ಹೊಂದಿದ್ದು, 209 ಕುಟುಂಬಗಳು ಉದ್ಯೋಗ ಪಡೆದಿವೆ ಎಂದು ವರದಿ ತಿಳಿಸಿದೆ.






