ಮಂಜೇಶ್ವರ: ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್ (ಕೆ.ಪಿ.ಎಸ್.ಟಿ.ಎ.) ಸಂಘಟನೆಯ ಸದಸ್ಯತನ ವಿತರಣೆ ಮಂಜೇಶ್ವರ ಉಪಜಿಲ್ಲಾ ಮಟ್ಟದ ಉದ್ಘಾಟನೆ ಉಪಜಿಲ್ಲಾ ವಿದ್ಯಾಧಿಕಾರಿ ಜೋರ್ಜ್ ಕ್ರಾಸ್ತಾ ಇವರಿಗೆ ಕೆ.ಪಿ.ಎಸ್.ಟಿ.ಎ ಉಪಜಿಲ್ಲಾ ಕಾರ್ಯದರ್ಶಿ ಓ.ಎಂ ರಶೀದ್ ನೀಡಿ ಗುರುವಾರ ಚಾಲನೆ ನೀಡಿದರು.
ಕಾಸರಗೋಡು ಕಂದಾಯ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಜನಾರ್ದನ್ ಕೆ.ವಿ., ಜಿಲ್ಲಾ ಜೊತೆ ಕಾರ್ಯದರ್ಶಿ ವಿಮಲ್ ಅಡಿಯೋಡಿ, ಉಪಜಿಲ್ಲಾ ಉಪಾಧ್ಯಕ್ಷ ಇಸ್ಮಾಯಿಲ್ ಮೀಯಪದವು, ಅಲ್ಪ ಸಂಖ್ಯಾತ ಸೆಲ್ ಕನ್ವೀನರ್ ಶ್ರೀನಿವಾಸ ಕೆ.ಎಚ್. ಧರ್ಮತ್ತಡ್ಕ, ಜಿಲ್ಲಾ ಸಮಿತಿ ಸದಸ್ಯೆ ಸೌಮ್ಯ ಪಿ., ಅಕಾಡೆಮಿಕ್ ಕೌನ್ಸಿಲ್ ಕನ್ವೀನರ್ ರವಿಶಂಕರ ಕೆ. ಪಾಲ್ಗೊಂಡರು.

.jpg)
