ಕಾಸರಗೋಡು: ಜಿಲ್ಲೆಯ ವೆಳ್ಳರಿಕುಂಡು ಮತ್ತು ಹೊಸದುರ್ಗ ತಾಲ್ಲೂಕುಗಳಲ್ಲಿ ಎಂಟು ಶಿಬಿರಗಳನ್ನು ಪ್ರಾರಂಭಿಸಲಾಗಿದೆ. ವೆಲ್ಲರಿಕುಂಡು ತಾಲ್ಲೂಕಿನ ಮಾಲೋತ್ ಗ್ರಾಮದ ಪರಂಬ ಜಿಎಲ್‍ಪಿಎಸ್‍ನಲ್ಲಿ ಪ್ರಾರಂಭಿಸಲಾದ ಶಿಬಿರದಲ್ಲಿ ಒಟ್ಟು 14 ಕುಟುಂಬಗಳು ವಾಸ್ತವ್ಯ ಹೂಡಿದ್ದು, ಶಿಬಿರದಲ್ಲಿ 44 ಮಂದಿ ಸಂತ್ರಸ್ತರಿದ್ದಾರೆ. ಹೊಸದುರ್ಗದ ಕಡಪ್ಪುರಂನ ಜಿಎಫ್‍ಎಲ್‍ಪಿ ಶಾಲೆಯಲ್ಲಿ ಪ್ರಾರಂಭವಾದ ಶಿಬಿರದಲ್ಲಿ ಮೂರು ಕುಟುಂಬಗಳ ಏಳು ಮಂದಿ ಸಂತ್ರಸ್ತರಿದ್ದಾರೆ. ಕಣಿಚಿರ ಸಮುದಾಯ ಭವನದಲ್ಲಿ ತೆರೆಯಲಾಗಿರುವ ಶಿಬಿರದಲ್ಲಿ ಆರು ಕುಟುಂಬಗಳ 14 ಜನರಿದ್ದಾರೆ, ತುರುತಿ ಗ್ರಾಮದ ಜಿಎಫ್‍ವಿಎಚ್‍ಎಸ್‍ಎಸ್ ಚೆರುವತ್ತೂರಿನಲ್ಲಿ ಆರಂಭಿಸಲಾದ ಸಂತ್ರಸ್ತರ ಶಿಬಿರದಲ್ಲಿ 17 ಪುರುಷರು, 20 ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದಂತೆ 41 ಮಂದಿ ಸಂತ್ರಸ್ತರಿದ್ದಾರೆ. ಪಡನ್ನದ ಶಿಬಿರದಲ್ಲಿ 21ಮಂದಿ, ಕಾಞಂಗಾಡ್‍ಗ್ರಾಮದ ಪುಂಜಾವಿ ಜಿಎಲ್‍ಪಿಎಸ್ ಶಿಬಿರದಲ್ಲಿ 12 ಪುರುಷರು ಮತ್ತು 17 ಮಹಿಳೆಯರು ಸೇರಿದಂತೆ 29 ಜನರು ಭಾಗವಹಿಸಿದ್ದಾರೆ.
ಎರಡುವರೆ ಕೋಟಿ. ಮೊತ್ತದ ಕೃಷಿ ಹಾನಿ:
ಜೂನ್ 1 ರಿಂದ 17 ರವರೆಗೆ ಜಿಲ್ಲೆಯಲ್ಲಿ ಮುಂಗಾರು ಮಳೆಯಿಂದ ಸುಮಾರು 2.50ಕೊಟಿ ರೂ. ನಷ್ಟ ಸಂಭವಿಸಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಬಾಳೆ ಕೃಷಿಯಲ್ಲಿನ ನಷ್ಟವಾಗಿದೆ. 5466 ಮಂದಿ ಕೃಷಿಕರು 8.55 ಹೆಕ್ಟೇರ್ ಭೂಮಿಯಲ್ಲಿ ಬೆಳೆಸಿರುವ 21363 ಬಾಳೆ ಗಿಡಗಳು ಹಾನಿಗೀಡಾಗಿದ್ದು, 128.18 ಲಕ್ಷ ರೂ. ನಷ್ಟ ಸಂಭವಿಸಿದೆ. 1.40 ಹೆಕ್ಟೇರ್ ಭೂಮಿಯಲ್ಲಿ ಬೆಳೆಸಿರುವ 3511 ತೆಂಗಿನ ಮರಗಳು ಹಾನಿಗೀಡಾಗಿದ್ದು, 14.04ಲಕ್ಷ ರೂ. ಸೇರಿದಂತೆ ಒಟ್ಟು 142.24 ಲಕ್ಷ ರೂ. ನಷ್ಟ ಸಂಭವಸಿದೆ.
ಅಡಕೆ ಕೃಷಿಯಲ್ಲಿ, 1010 ಕೃಷಿಕರ 5.80 ಹೆಕ್ಟೇರ್ ಭೂಮಿಯಲ್ಲಿ ಬೆಳೆಸಿರುವ 7946 ಅಡಕೆಮರಗಳು ಹಾನಿಗೀಡಗಿದ್ದು, 23.84ಲಕ್ಷ ರಊ. ನಷ್ಟ ಸಂಭವಿಸಿದೆ. ತರಕರಿ, ಭತ್ತದ ಕೃಷಿಗೂ ಅಪಾರ ಹಾನಿ ಸಂಭವಿಸಿದೆ.
ತಗ್ಗುತ್ತಿರುವ ಪ್ರವಾಹ:
ಮಂಗಳವಾರ ಮಧ್ಯಾಹ್ನ ನಂತರ ಜಿಲ್ಲೆಯಲ್ಲಿ ಮಳೆ ಅಲ್ಪ ತಗ್ಗಿದ್ದು, ನೆರೆ ನೀರು ಇಳಿಯಲಾರಂಭಿಸಿದೆ. ಮಧುವಾಹಿನಿ ಹೊಳೆ ತುಂಬಿ ಹರಿಯುತ್ತಿರುವುದರಿಂದ ಮಧೂರು ದೇವಾಲಯದೊಳಗೆ ಮಂಗಳವಾರ ಭಾರಿ ಪ್ರಮಾಣದಲ್ಲಿ ನೆರೆನೀರು ಹರಿದು ಬಂದಿದ್ದು, ಭಕ್ತದಿಗಳು ನೆರೆ ನೀರಿನಲ್ಲೇ ಸಂಚರಿಸಿ ಶ್ರೀದೇವರ ದರ್ಶನ ಪಡೆದರು. ಮಧೂರು ದೇವಾಲಯದೊಳಗೆ ಈ ವರ್ಷ ಮೂರನೇ ಬಾರಿಗೆ ನೆರೆ ನೀರು ನುಗ್ಗಿದೆ.



