ಬದಿಯಡ್ಕ: ಅಗಲ್ಪಾಡಿ ಎಸ್‍ಎಪಿ ಹೈಯರ್ ಸೆಕೆಂಡರಿ ಶಾಲಾ ಬೋಧಕೇತರ ಸಿಬ್ಬಂದಿ ಕುಂಬ್ಡಾಜೆ ಉಬ್ರಂಗಳ ಸೀತಾಂಗುಲಿ ನಿವಾಸಿ ಎಸ್.ಬಾಲಕೃಷ್ಣ(48)ಎಂಬವರ ಮೃತದೇಹ ಮನೆ ಸನಿಹದ ರಬ್ಬರ್ ತೋಟದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಾಲಕೃಷ್ಣ ಅವರು ಭಾನುವಾರ ಬೆಳಗ್ಗೆ ಮನೆಯಿಂದ ಹೊರಟವರು ನಂತರ ನಾಪತ್ತೆಯಾಗಿದ್ದರು. ಹುಡುಕಾಡುವ ಮಧ್ಯೆ ಮೃತದೇಹ ಪತ್ತೆಯಾಗಿದೆ. ಬದಿಯಡ್ಕ ಠಾಣೆ ಪೊಲೀಸರು ಅಸಹಜ ಸಾವಿನ ಬಗ್ಗೆ ಕೇಸು ದಾಖಲಿಸಿಕೊಂಡಿದ್ದಾರೆ.




