HEALTH TIPS

15 ಗಂಟೆಯಲ್ಲಿ ನಾಲ್ವರು ಗಗನಯಾನಿಗಳು ಐಎಸ್‌ಎಸ್‌ಗೆ: ಸ್ಪೇಸ್‌ಎಕ್ಸ್ ಸಾಧನೆ

ಕೇಪ್‌ ಕೆನವೆರಲ್: ಅಮೆರಿಕದ ಸ್ಪೇಸ್‌ಎಕ್ಸ್‌ ನಾಲ್ವರು ಗಗನಯಾನಿಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಶನಿವಾರ ತಲುಪಿಸಿದೆ. 

ಕೇವಲ 15 ಗಂಟೆಗಳಲ್ಲಿ ಈ ಬಾಹ್ಯಾಕಾಶ ಯಾನವನ್ನು ಪೂರ್ಣಗೊಳಿಸಿರುವುದು ಗಮನಾರ್ಹ.

ನಾಸಾದ ಜೆನಾ ಕಾರ್ಡ್‌ಮ್ಯಾನ್‌, ಮೈಕ್ ಫಿನ್ಕೆ, ಜಪಾನ್‌ನ ಕಿಮಿಯಾ ಯುಯಿ ಹಾಗೂ ರಷ್ಯಾದ ಒಲೆಗ್‌ ಪ್ಲಾಟೊನೋವ್‌ ಅವರು ಇದ್ದ ಬಾಹ್ಯಾಕಾಶ ಕೋಶ ಹೊತ್ತ ರಾಕೆಟ್ 'ಫಾಲ್ಕನ್‌-9' ಅನ್ನು, ಇಲ್ಲಿನ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನ ಮಾಡಲಾಯಿತು.

ಈ ನಾಲ್ವರು ಗಗನಯಾನಿಗಳು ಐಎಸ್‌ಎಸ್‌ನಲ್ಲಿ ಆರು ತಿಂಗಳು ಇರುವರು. ಕಳೆದ ಮಾರ್ಚ್‌ನಿಂದ ಐಎಸ್‌ಎಸ್‌ನಲ್ಲಿ ಇರುವ ನಾಲ್ವರು ಗಗನಯಾನಿಗಳನ್ನು ಸ್ಪೇಸ್‌ಎಕ್ಸ್‌ನ ಬಾಹ್ಯಾಕಾಶ ಕೋಶ ಬುಧವಾರದ ವೇಳೆ ಭೂಮಿಗೆ ಮರಳಿ ಕರೆದುಕೊಂಡು ಬರಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries