HEALTH TIPS

ಸವಿಹೃದಯದ ಕವಿಮಿತ್ರರು ವೇದಿಕೆಯಿಂದ 'ಆಟಿ' ಅಕ್ಷರ ಕೂಟ

ಕಾಸರಗೋಡು: ಪೆರ್ಲದ ಸವಿಹೃದಯದ ಕವಿಮಿತ್ರರು ವೇದಿಕೆಯ ವತಿಯಿಂದ ಆಷಾಢ ಮಾಸದ ವಿಶೇಷತೆಯಾಗಿ'ಆಟಿ' ಅಕ್ಷರ ಕೂಟ ವೈವಿಧ್ಯಮಯ ಕಾರ್ಯಕ್ರಮ ಕಾಸರಗೋಡಿನ ಕೂಡ್ಲು ಗಂಗೇ ರೋಡಿನ ಲಕ್ಷ್ಮೀ ಗೋವಿಂದ ನಿವಾಸದಲ್ಲಿ ಜರಗಿತು.

ಇದರ ಅಂಗವಾಗಿ ನಡೆದ ಸಭಾ ಕಾರ್ಯಕ್ರಮವನ್ನು ಡಾ| ಕಿಶೋರ್ ಕುಮಾರ್ ರೈ, ಶೇಣಿ ಚೆನ್ನೆಮಣೆ ಆಟ ಆಡುವ ಮೂಲಕ ಉದ್ಘಾಟಿಸಿದರು. ಕ.ಸಾ.ಪ ಕಾರ್ಯಕಾರೀ ಸಮಿತಿ ಸದಸ್ಯೆ ಆಯಿಶಾ ಎ.ಎ. ಪೆರ್ಲ ಅಧ್ಯಕ್ಷತೆ ವಹಿಸಿದ್ದರು.ಆಶಾ ದಿಲೀಪ್ ಸುಳ್ಯಮೆ ಆಟಿ ಆಚರಣೆ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಸಾಮಾಜಿಕ ಧಾರ್ಮಿಕ ಮುಂದಾಳು ಮುರಳಿಧರ ಯಾದವ್ ನಾಯ್ಕಾಪು, ಕವಿ ಶಿಕ್ಷಕ ಹರೀಶ್ ಸುಲಾಯ ಒಡ್ಡಂಬೆಟ್ಟು ಮುಖ್ಯ ಅತಿಥಿಗಳಾಗಿದ್ದರು. 

ಈ ಸಂದರ್ಭದಲ್ಲಿ ಹಿರಿಯ ಹೋಟೆಲ್ ಉದ್ಯಮಿ ಗೋವಿಂದ ನಾಯ್ಕ  ಅರೆಮಂಗಿಲ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ, ಸಂಘಟಕ ಜಯ ಮಣಿಯಂಪಾರೆ ಅಭಿನಂದನಾ ಭಾಷಣಗೈದರು.

ಸವಿಹೃದಯದ ಕವಿಮಿತ್ರರು ವೇದಿಕೆ ಸಂಚಾಲಕ ಸುಭಾಷ್ ಪೆರ್ಲ ಸ್ವಾಗತಿಸಿ, ಬೇಬಿ ಜಯರಾಂ ವಂದಿಸಿದರು. ಜಯಪ್ರಕಾಶ್, ಮಣಿಯಂಪಾರೆ ಪ್ರಾರ್ಥನೆ ಹಾಡಿದರು. ನವ್ಯಶ್ರೀ ಸ್ವರ್ಗ ನಿರೂಪಿಸಿದರು. ಬಳಿಕ ಗೀತಾ ಗಾಯನ, ಕವಿ ಸಮಯ ಕಾರ್ಯಕ್ರಮದಲ್ಲಿ ಬಹುಭಾಷಾ ಕವಿ -ಕಾವ್ಯ - ಸಂವಾದ ಜರಗಿತು ರಘು ಇಡ್ಕಿದು ಅವರ ಅಧ್ಯಕ್ಷತೆಯಲ್ಲಿ ರಾಜಾರಾಮ ವರ್ಮ ವಿಟ್ಲ ಚಾಲನೆ ನೀಡಿದರು.ದಿವ್ಯಾ ಗಟ್ಟಿ ಪರಕ್ಕಿಲ ಸ್ವಾಗತಿಸಿದರು. ನರಸಿಂಹ ಭಟ್, ಏತಡ್ಕ ಪ್ರೇಮ ಕಿಶೋರ್, ಪುತ್ತೂರು ಸುಶೀಲ ಪದ್ಯಾಣ, ಗಣೇಶ್ ಪೈ ಬದಿಯಡ್ಕ , ಜೋತ್ಸಾ ಎಂ.ಕಡಂದೇಲು,ಹಿತೇಶ್ ಕುಮಾರ್ ಎ.,ರವೀಂದ್ರನ್ ಪಾಡಿ,ವಿಜಯ ಕಾನ,ವಿಶ್ವನಾಥ ಕುಲಾಲ್, ಮಿತ್ತೂರು ಕವಿತಾ ವಾಚನಗೈದರು. ವನಜಾಕ್ಷಿ ಚಂಬ್ರಕಾನ ನಿರೂಪಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries