HEALTH TIPS

ದೇಶದ ಹಿತಾಸಕ್ತಿ ರಕ್ಷಿಸಲು ಭಾರತ ಬದ್ಧ: ಟ್ರಂಪ್ ಸುಂಕಕ್ಕೆ ನವದೆಹಲಿ ತಿರುಗೇಟು

ನವದೆಹಲಿ: ಭಾರತದ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ 25ರಷ್ಟು ಸುಂಕ ವಿಧಿಸಿರುವ ಅಮೆರಿಕದ ನಡೆಯನ್ನು ಖಂಡಿಸಿರುವ ಭಾರತ, 'ಈ ಕ್ರಮಗಳು ನ್ಯಾಯಸಮ್ಮತವಲ್ಲದ್ದು ಮತ್ತು ಅಸಮಂಜಸವಾಗಿದೆ. ಭಾರತವು ತನ್ನ ಹಿತಾಸಕ್ತಿಯನ್ನು ರಕ್ಷಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ' ಎಂದು ಹೇಳಿದೆ.

ರಷ್ಯಾದೊಂದಿಗೆ ಭಾರತ ತೈಲ ವ್ಯಾಪಾರ ನಡೆಸುವುದಕ್ಕೆ ದಂಡವಾಗಿ ಹೆಚ್ಚುವರಿ ಶೇ 25 ರಷ್ಟು (ಈ ಹಿಂದೆ ಶೇ 25 ರಷ್ಟು ಸುಂಕ ವಿಧಿಸಿತ್ತು) ಸುಂಕ ವಿಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶ ಹೊರಡಿಸಿದ ಬೆನ್ನಲ್ಲೇ ಪ್ರಕಟಣೆ ಹೊರಡಿಸಿರುವ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಟ್ರಂಪ್‌ ನಡೆಗೆ ಆಕ್ರೋಶ ವ್ಯಕ್ತಪಡಿಸಿದೆ.

ಇತ್ತೀಚೆಗೆ ರಷ್ಯಾದಿಂದ ಭಾರತ ತೈಲ ಆಮದು ಮಾಡಿಕೊಳ್ಳುತ್ತಿರುವುದನ್ನೇ ಗುರಿಯಾಗಿಸಿ ಅಮೆರಿಕವು ಭಾರತದ ಮೇಲೆ ಹೆಚ್ಚಿನ ಸುಂಕವನ್ನು ವಿಧಿಸುತ್ತಿದೆ. ಈ ವಿಚಾರದಲ್ಲಿ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ನಮ್ಮ ಆಮದು ಮಾರುಕಟ್ಟೆಗೆ ಅನುಗುಣವಾಗಿದೆ. ಭಾರತದ 1.4 ಶತಕೋಟಿ ಜನರ ಇಂಧನ ಭದ್ರತೆಯನ್ನು ಖಾತರಿಪಡಿಸುವ ಉದ್ದೇಶದಿಂದ ತೈಲ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇತರ ದೇಶಗಳು ತಮ್ಮ ರಾಷ್ಟ್ರದ ಹಿತಾಸಕ್ತಿಗಾಗಿ ಸರಕನ್ನು ಆಮದು ಮಾಡಿಕೊಳ್ಳುತ್ತಿವೆ. ಆದರೆ ಭಾರತದ ಮೇಲೆ ಮಾತ್ರ ಅಮೆರಿಕ ಹೆಚ್ಚುವರಿ ಸುಂಕ ವಿಧಿಸುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಹೆಚ್ಚುವರಿ ಸುಂಕದ ಆದೇಶದ ಬಳಿಕ ಭಾರತದ ಸರಕುಗಳ ಮೇಲಿನ ಸುಂಕವು ಶೇ 50ಕ್ಕೆ ತಲುಪಿದೆ. ಮೊದಲು ವಿಧಿಸಿದ್ದ ಶೇ 25ರಷ್ಟು ಸುಂಕ ನೀತಿ ಆ.7ರಿಂದ ಜಾರಿಗೆ ಬರಲಿದ್ದು, ಈಗ ಹೊಸದಾಗಿ ವಿಧಿಸಿದ ಸುಂಕವು 21 ದಿನಗಳ ನಂತರ ಅನ್ವಯವಾಗಲಿದೆ ಎಂದು ಶ್ವೇತಭವನ ಆದೇಶದಲ್ಲಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries