HEALTH TIPS

ಪ್ರಧಾನಿ ಮೋದಿ ಅವರಿಗೆ ದೊರೆತಿರುವ 1300 ಉಡುಗೊರೆಗಳ ಆನ್‌ಲೈನ್‌ ಹರಾಜು ಆರಂಭ

 ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ದೊರೆತಿರುವ 1300 ವಸ್ತುಗಳ ಆನ್‌ಲೈನ್‌ ಹರಾಜು ಪ್ರಕ್ರಿಯೆಯು ಬುಧವಾರ ಆರಂಭಗೊಂಡಿದೆ.

ಭವಾನಿ ದೇವಿಯ ಮೂರ್ತಿ, ಅಯೋಧ್ಯ ರಾಮಮಂದಿರದ ಮಾದರಿ, 2024ರ ಪ್ಯಾರಾಲಿಂಪಿಕ್ ಗೇಮ್ಸ್‌ನ ಸ್ಮರಣಿಕೆಗಳು ಸೇರಿದಂತೆ ಹಲವು ವಸ್ತುಗಳನ್ನು ಹರಾಜಿಗಿಡಲಾಗಿದೆ.


ಆನ್‌ಲೈನ್‌ ಹರಾಜು ಪ್ರಕ್ರಿಯೆಯ ಏಳನೇ ಆವೃತ್ತಿಯು ಪ್ರಧಾನಿ ಮೋದಿ ಅವರ 75ನೇ ಜನ್ಮದಿನದಂದೇ ಆರಂಭಗೊಂಡಿದೆ. ಆಕ್ಟೋಬರ್‌ 2ರವರೆಗೆ ಈ ಆನ್‌ಲೈನ್‌ ಹರಾಜು ನಡೆಯಲಿದೆ.

'ಭವಾನಿ ದೇವಿಯ ಮೂರ್ತಿಗೆ ₹10,39,500, ರಾಮ ಮಂದಿರದ ಮಾದರಿಗೆ ₹5.5 ಲಕ್ಷ ಮತ್ತು ಪ್ಯಾರಲಿಂಪಿಕ್ ಪದಕ ವಿಜೇತರ ಮೂರು ಜೊತೆ ಬೂಟುಗಳಿಗೆ ತಲಾ ₹7.7 ಲಕ್ಷ ಆರಂಭಿಕ ಬೆಲೆ ನಿಗದಿಪಡಿಸಲಾಗಿದೆ' ಎಂದು ಕೇಂದ್ರ ಸ‌ಂಸ್ಕೃತಿ ಸಚಿವಾಲಯ 'ಎಕ್ಸ್‌'ನಲ್ಲಿ ತಿಳಿಸಿದೆ.

'ಪ್ರಧಾನಿ ಮೋದಿ ಅವರಿಗೆ ಉಡುಗೊರೆಯಾಗಿ ಲಭಿಸಿರುವ ವಸ್ತುಗಳನ್ನು ದೆಹಲಿಯ 'ನ್ಯಾಷನಲ್‌ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌'ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿದೆ' ಎಂದು ಸಚಿವಾಲಯವು ಹೇಳಿದೆ.

ಜಮ್ಮು-ಕಾಶ್ಮೀರದಲ್ಲಿ ತಯಾರಿಸಿದ ಕಸೂತಿ ಕಲೆಯಿರುವ ಪಶ್ಮಿನಾ ಶಾಲೂ, ತಂಜಾವೂರು ಶೈಲಿಯಲ್ಲಿ ಬಿಡಿಸಿದ ರಾಮ ದರ್ಬಾರಿನ ಚಿತ್ರ, ನಟರಾಜ ವಿಗ್ರಹ ಮತ್ತಿತರ ವಸ್ತುಗಳು ಹರಾಜಿನಲ್ಲಿವೆ.

'ಪ್ರಧಾನಿ ಮೋದಿ ಅವರಿಗೆ ದೊರಕಿದ ಸಾವಿರಾರು ಉಡುಗೊರೆಗಳನ್ನು 2019ರಿಂದ ಹರಾಜಿಗಿಡಲಾಗಿದ್ದು, ಇದರಿಂದ ದೊರೆತ ₹50 ಕೋಟಿಗೂ ಅಧಿಕ ಹಣವನ್ನು 'ನಮಾಮಿ ಗಂಗೆ' ಯೋಜನೆಗೆ ವಿನಿಯೋಗಿಸಲಾಗಿದೆ' ಎಂದು ಸಚಿವಾಲಯ ತಿಳಿಸಿದೆ.

ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಭಾರತದ ಪ್ಯಾರಾಅಥ್ಲಿಟ್‌ಗಳು ನೀಡಿರುವ ಸ್ಮರಣಿಕೆಗಳು ಈ ಬಾರಿಯ ಹರಾಜಿನ ವಿಶೇಷತೆಯಾಗಿವೆ.

ಪ್ರಧಾನಿ ಮೋದಿ ಅವರಿಗೆ ದೊರೆತಿರುವ ಉಡಗೊರೆಯನ್ನು 'ನ್ಯಾಷನಲ್‌ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌'ನಲ್ಲಿ ಪ್ರದರ್ಶನಕ್ಕಿಡಲಾಗಿದೆ

ಪ್ರಧಾನಿ ಮೋದಿ ಅವರಿಗೆ ಉಡುಗೊರೆಯಾಗಿ ದೊರೆತಿರುವ ಆನೆ ಮುಖದ ನಂದಿ ವಿಗ್ರಹವನ್ನು 'ನ್ಯಾಷನಲ್‌ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌'ನಲ್ಲಿ ಪ್ರದರ್ಶನಕ್ಕಿಡಲಾಗಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries