HEALTH TIPS

ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ 2025- ಮಂಜೇಶ್ವರ ಬ್ಲಾಕ್ ಪಂಚಾಯತಿ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯತಿಗಳ ಮೀಸಲಾತಿ ವಾರ್ಡ್‍ಗಳ ಘೋಷಣೆ

ಮಂಜೇಶ್ವರ: ಸ್ಥಳೀಯಾಡಳಿತ ಚುನಾವಣೆ 2025 ರ ಭಾಗವಾಗಿ, ಜಿಲ್ಲೆಯ ಮೂರು ಬ್ಲಾಕ್ ಪಂಚಾಯತಿಗಳ ವ್ಯಾಪ್ತಿಯಲ್ಲಿರುವ ಗ್ರಾಮಗಳಿಗೆ ಮೀಸಲಾತಿ ವಾರ್ಡ್‍ಗಳಿಗೆ ಲಾಟ್ ಡ್ರಾ ಪೂರ್ಣಗೊಂಡಿದೆ. ಕಾರಡ್ಕ ಬ್ಲಾಕ್ ಪಂಚಾಯತಿ ವ್ಯಾಪ್ತಿಯಲ್ಲಿರುವ ಮುಳಿಯಾರ್, ಕಾರಡ್ಕ, ದೇಲಂಪಾಡಿ, ಬೇಡಡ್ಕ, ಕುತ್ತಿಕೋಲ್, ಬೆಳ್ಳೂರು ಮತ್ತು ಕುಂಬ್ಡಾಜೆ ಪಂಚಾಯತಿಗಳು, ಮಂಜೇಶ್ವರ ಬ್ಲಾಕ್ ಪಂಚಾಯತಿ ಮಿತಿಯಲ್ಲಿರುವ ಮಂಜೇಶ್ವರ, ವರ್ಕಾಡಿ ಮೀಂಜ, ಪೈವಳಿಕೆ, ಎಣ್ಮಕಜೆ, ಮಂಗಲ್ಪಾಡಿ ಮತ್ತು ಪುತ್ತಿಗೆ ಪಂಚಾಯತಿಗಳ ಮೀಸಲಾತಿ ವಾರ್ಡ್‍ಗಳ  ಲಾಟ್ ಡ್ರಾ ಪೂರ್ಣಗೊಂಡಿದ್ದು, ಮೀಸಲಾತಿ ವಾರ್ಡ್‍ಗಳನ್ನು ಘೋಷಿಸಲಾಗಿದೆ. 

ಮಂಜೇಶ್ವರ ಬ್ಲಾಕ್ ಪಂಚಾಯತಿ ವ್ಯಾಪ್ತಿಯ ವರ್ಕಾ

ಡಿ ಪಂಚಾಯತಿಯ ಒಂದನೇ ವಾರ್ಡ್ ನ್ನು ಪರಿಶಿಷ್ಟ ಜಾತಿಗೆ ಮೀಸಲಿಡಲಾಗಿದೆ ಮತ್ತು ಮಹಿಳೆಯರಿಗೆ ಕೆದುಂಬಾಡಿ (3), ತೌಡುಗೋಳಿ (4), ಪಾವಳ (5), ಸುಳ್ಯಮೆ (7), ಪಾತೂರು (8), ಬೋರ್ಕಳ (11), ಬದಿಯಾರ್ (13), ಧರ್ಮನಗರ (14), ಮತ್ತು ನಲ್ಲಕ್ಕಿ (16) ಎಂದು ಮೀಸಲಿಡಲಾಗಿದೆ. 

ಮೀಂಜ ಪಂಚಾಯಿತಿಯ ಹದಿನೈದನೇ ವಾರ್ಡ್ ಅನ್ನು ಪರಿಶಿಷ್ಟ ಜಾತಿ ಮೀಸಲಾತಿ ಸ್ಥಾನಗಳೆಂದು ಘೋಷಿಸಲಾಗಿದೆ ಮತ್ತು ಮಹಿಳೆಯರಿಗಾಗಿ ಕಳಿಯೂರು (1), ಕೋಳ್ಯೂರು (3), ಅರಿಯಾಳ (6), ಬಾಳಿಯೂರು (8), ಕುಳೂರು (9), ಮೂಡಂಬೈಲು(10), ಪಟ್ಟತ್ತೂರು (11), ಬೆಜ್ಜ (14), ಮತ್ತು ಗಾಂಧಿನಗರ (14) ಎಂದು ಮೀಸಲಿಡಲಾಗಿದೆ. 

ಮಂಗಲ್ಪಾಡಿ ಪಂಚಾಯತಿಯ 17ನೇ ವಾರ್ಡ್ ಪರಿಶಿಷ್ಟ ಜಾತಿ ಮೀಸಲಾತಿ ಹಾಗೂ ಮುಸೋಡಿ (1), ಉಪ್ಪಳ ಟೌನ್ (4), ಕೋಡಿಬೈಲು (5), ಸೋಂಕಾಲ್ (6), ಪಚ್ಚಂಬಳ (10), ಹೇರೂರು (11), ಇಚ್ಲಂಗೋಡು (12), ಮಡಂದೂರು (13), ಅಡ್ಕ (18), ಮಲ್ಲಂಗೈ(29), ಮಾವಿನಡಿ (19), ಪೆರಿಂಗಡಿ(21), ಮಣಿಮುಂಡ(24) ಎಂಬಂತೆ ಮಹಿಳೆಯರಿಗೆ ಮೀಸಲಿರಿಸಲಾಗಿದೆ. 

ಪುತ್ತಿಗೆ ಪಂಚಾಯಿತಿಯಲ್ಲಿ ಡ್ರಾದಲ್ಲಿ ಘೋಷಿಸಲಾದ ಪಟ್ಟಿಯ ಪ್ರಕಾರ ಮುಕಾರಿಕಂಡ (13) ವಾರ್ಡ್ ಪರಿಶಿಷ್ಟ ಜಾತಿ ಮೀಸಲಾತಿಯಾಗಿದೆ. ಚೆನ್ನಿಕೋಡಿ (1), ದೇರಡ್ಕ (3), ಮುಂಡಿತ್ತಡ್ಕ (5), ಮುಗು (7), ಊಜಂಪದವು (8), ಕಣ್ಣೂರು (10), ಎಡನಾಡು (12), ಮತ್ತು ಕತೀಬ್ ನಗರ (15) ಮಹಿಳಾ ಮೀಸಲಾತಿ ವಾರ್ಡ್‍ಗಳಾಗಿ ಘೋಷಿಸಲಾಗಿದೆ.

ಎಣ್ಮಕಜೆ ಪಂಚಾಯಿತಿಯಲ್ಲಿ ಬಜಕ್ಕೂಡ್ಲು (12) ವಾರ್ಡ್ ಪರಿಶಿಷ್ಟ ಜಾತಿಗೆ ಮೀಸಲಿರಿಸಲಾಗಿದೆ. ಮಹಿಳಾ ಮೀಸಲಾತಿ ವಾರ್ಡ್‍ಗಳು ಸಾಯ (1), ಕಾಟುಕುಕ್ಕೆ(4), ಪೆರ್ಲ ಉತ್ತರ (5), ಪೆರ್ಲ ಟೌನ್ (6), ವಾಣಿನಗರ (9), ಕಜಂಪಾಡಿ (10), ಪೆರ್ಲ ದಕ್ಷಿಣ (11), ಶೇಣಿ (15), ಮತ್ತು ಬೇಂಗಪದವು (17) ಎಂಬಿವುಗಳಾಗಿವೆ.

ಪೈವಳಿಕೆ ಪಂಚಾಯಿತಿಯಲ್ಲಿ ಪರ್ವಡಿ(7)ಪರಿಶಿಷ್ಟ ಜಾತಿ ಮೀಸಲು ವಾರ್ಡ್ ಆಗಿ ಮೀಸಲಿರಿಸಲಾಗಿದೆ. ಮಹಿಳಾ ಮೀಸಲಾತಿ ವಾರ್ಡ್‍ಗಳು ಕುರುಡಪದವು (1), ಚಿಪ್ಪಾರ್ (3), ಅವಳ (5), ಕೂಡೆಲು(13), ಪರಂಬಳ (15), ಕೊಕ್ಕೆಜಾಲು(16), ಕಯ್ಯಾರ್ (17), ಅಟ್ಟೆಗೋಳಿ (18), ಪೈವಳಿಕೆ (19), ಕಳಾಯಿ (20), ಕಡೆಂಕೋಡಿ(21) ಎಂಬಂತೆ ಮೀಸಲಿಡಲಾಗಿದೆ.

ಮಂಜೇಶ್ವರ ಗ್ರಾಮ ಪಂಚಾಯತ್ ನ ಹದಿನಾರನೇ ವಾರ್ಡ್ ಬಂಗ್ರಮಂಜೇಶ್ವರ ಪರಿಶಿಷ್ಟ ಜಾತಿ ಮೀಸಲು ಸ್ಥಾನವೆಂದು ಘೋಷಿಸಲಾಗಿದ್ದು, ಉದ್ಯಾವರಬೈಲು(3), ಉದ್ಯಾವರ ಗುಡ್ಡೆ(8), ಬಡಾಜೆ(10), ಸತ್ತಡ್ಕ(11), ಕನಿಲ(13), ವಾಮಂಜೂರು ಗುಡ್ಡೆ(14), ಬಾವುಟಮೂಲೆ(19), ಉದ್ಯಾವರ ಸೌತ್(22), ಉದ್ಯಾವರ ನೋರ್ತ್(23)ಉದ್ಯಾವರ ಮಾಡ(24) ಎಂಬಂತೆ ಮಹಿಳಾ ಮೀಸಲಾತಿ ವಾರ್ಡ್ ಗಳನ್ನು ಆಯ್ಕೆಮಾಡಲಾಗಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries