ಕಾಸರಗೋಡು: ನಗರದ ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವೆಂಬರ್ 24ರಿಂದ 26ರ ವರೆಗೆ ಜರುಗಲಿರುವ ಷಷ್ಠಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಶ್ರೀಕ್ಷೇತ್ರದ ಉತ್ಸವ ಸಮಿತಿ ಅಧ್ಯಕ್ಷ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ, ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಹೇಶ್ ಮಾಳವಿಕಾ ಸಮಿತಿಯ ಪದಾಧಿಕಾರಿಗಳಾದ ರವಿ ಕೇಸರಿ, ಪವಿತ್ರನ್, ಅರವಿಂದ, ಸುನಿಲ್, ಸಜೇಶ್, ವಿಜೇಶ್,ಅಶೋಕ ಪಾಡಿ, ರಮೇಶ್ ತೋಟತ್ತಿಲ್, ವೇಲಾಯುಧನ್, ಶರತ್ ಹಾಗೂ ಮಾತೃ ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.


