ಕಾಸರಗೋಡು: ಸಮಾನಾಂತರ ಲಾಟರಿ ಜೂಜಾಟದಲ್ಲಿ ನಿರತರಾಗಿದ್ದ ನಾಲ್ವರನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ. ಭಗವತನಗರದ ಜಿ.ಆರ್ ರಾಧಾಕೃಷ್ಣ, ಕೂಡ್ಲು ಆರ್‍ಡಿ ನಗರದ ಅಭಿಷೇಕ್ ಕುಮಾರ್, ರಾಮದಾಸನಗರ ಹೊಸಮನೆ ರಸ್ತೆಯ ಪವನ್‍ರಾಜ್ ಹಾಗೂ ಕೋಟೆಕಣಿ ರಸ್ತೆಯ ರಾಜಾಪ್ರಸಾದ್ ಬಂಧಿತರು. ಬಂಧಿತರಿಂದ ಜೂಜಿಗೆ ಬಳಸಿದ್ದರೆನ್ನಲಾದ 26490ರೂ. ನಗದು ವಶಪಡಿಸಿಕೊಂಡಿದ್ದಾರೆ. ಕೇರಳ ರಾಜ್ಯಲಾಟರಿ ಕಾಯ್ದೆಯನ್ವಯ ಇವರ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ. ಸಾರ್ವಜನಿಕರಿಂದ ಹಣ ಸಂಗ್ರಹಿಸಿ, ತಮ್ಮದೇ ಆದ ಲಾಟರಿ ಅಂಕಿ ಫಲಿತಾಂಶವನ್ನು ಮೊಬೈಲ್ ಮೂಲಕ ತಲುಪಿಸುವುದು ಸಮಾನಾಂತರ ಲಾಟರಿ ಕಾರ್ಯನಿರ್ವಹಣೆಯಾಗಿದೆ. ಕಾಸರಗೋಡು ಎಎಸ್‍ಪಿ ನಂದಗೋಪನ್ ನಿರ್ದೇಶನ ಪ್ರಕಾರ ಕಾರ್ಯಾಚರಣೆ ನಡೆಸಲಾಗಿದೆ.

