ಕಾಸರಗೋಡು: ಮೊಗ್ರಾಲ್ ಪುತ್ತೂರಿನ ಕಸಾಯಿಖಾನೆಯಿಂದ ಪರಾರಿಯಾಗಿ ನಡೆಸಿದ ದಾಂಧಲೆಯಿಂದ ಗಂಭೀರ ಗಾಯಗೊಂಡಿದ್ದ ಬಾಲಕಕಾವುಗೋಳಿ ಕಡಪ್ಪುರ ನಿವಾಸಿ ರಾಜೇಶ್ ಎಂಬವರ ಪುತ್ರ, ಆರನೇ ತರಗತಿ ವಿದ್ಯಾರ್ಥಿ ಅದ್ವೈತ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ. ಈ ಮಧ್ಯೆ ದಾಂಧಲೆ ನಡೆಸಿ ಪರಾರಿಯಾಘಿದ್ದ ಕೋಣವನ್ನು ಕೊನೆಗೂ ಅಗ್ನಿಶಾಮಕದಳ, ಪೊಲೀಸ್ ಹಾಗೂ ಸ್ಥಳೀಯ ನಿವಾಸಿಗಳು ನಡೆಸಿದ ಕಾರ್ಯಾಚರಣೆಯಿಂದ ಸೋಮವಾರ ಸೆರೆಹಿಡಿದಿದ್ದಾರೆ.
ಭಾನುವಾರ ಸಂಜೆ ಪರಾರಿಯಾಗಿ ದಾಂಧಲೆಗೆ ತೊಡಗಿದ ಕೋಣ ಸನಿಹದ ಮನೆಯೊಂದಕ್ಕೆ ಹಾನಿಯೆಸಗಿದ ನಂತರ ಬಾಲಕನನ್ನು ತಿವಿದು ಗಾಯಗೊಳಿಸಿ ಸಮುದ್ದಕ್ಕೆ ಎಸೆದಿತ್ತು. ನಂತರ ನಾಪತ್ತೆಯಾಗಿದ್ದ ಕೋಣಕ್ಕಾಗಿ ಹುಡುಕಾಡಿದರೂ, ಪತ್ತೆಯಾಗದ ಹಿನ್ನೆಲೆಯಲ್ಲಿ ಸೋಮವಾರ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು.ಕಸಾಯಿಗೆ ತಂದಿದ್ದ ಕೋಣ ಮಚ್ಚಿನ ಏಟಿನಿಂದ ತಪ್ಪಿಸಿ ಪರಾರಿಯಾಗಿರಬೇಕೆಂದು ಸಂಶಯಿಸಲಾಗಿದೆ.


