ಕಾಸರಗೋಡು: ಅನಂತಪುರದ ಪ್ಲೈವುಡ್ ಕಾರ್ಖಾನೆಯೊಂದರಿಂದ ನಾಪತ್ತೆಯಾಗಿದ್ದ ಜೋಡಿಯನ್ನು ಶೋರ್ನೂರ್‍ನಿಂದ ಅಲ್ಲಿನ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರ್ಖಾನೆಯಲ್ಲಿ ಕೆಲಸಕ್ಕಿದ್ದ ಅಸ್ಸಾಂ ನಿವಾಸಿ ನೂರುಲ್ ಇಸ್ಲಾಂ ಎಂಬವರ ಪತ್ನಿ ಅಜಿದಾ ಕಾಥೂನ್ ಹಾಗೂ ಅಸ್ಸಾಂ ನಿವಾಸಿ, ಇದೇ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕ ಪೊಲೀಸ್ ವಶದಲ್ಲಿರುವವರು. ಒಂದುವರೆ ವರ್ಷದ ಮಗುವಿನ ಜತೆ ಪತ್ನಿ ನಾಪತ್ತೆಯಾಗಿದ್ದು, ಇತ್ತೀಚೆಗೆ ಅಸ್ಸಾಂನಿಂದ ಕಾರ್ಖಾನೆಗೆ ಕೆಲಸಕ್ಕೆ ಆಘಮಿಸಿದ್ದ ಯುವಕನ ಜತೆ ಪರಾರಿಯಾಗಿರುವುದಾಗಿ ನೂರುಲ್ ಇಸ್ಲಾಂ ನೀಡಿದ ದೂರಿನನ್ವಯ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ವಿವಿಧ ಠಾಣೆಗಳಿಗೆ ನೀಡಿದ ಮಾಹಿತಿಯನ್ವಯ ಜೋಡಿಯನ್ನು ಶೋರ್ನೂರ್ ರೈಲ್ವೆ ನಿಲ್ದಾಣದಿಂದ ವಶಕ್ಕೆ ತೆಗೆದುಕೊಳ್ಳಲಾಗಿತ್ತು.

