ಕುಂಬಳೆ: ಕುಂಬಳೆ ಸನಿಹದ ನಾರಾಯಣಮಂಗಲದಲ್ಲಿ ಸರ್ಕಾರಿ ನೌಕರ, ನಾರಾಯಣಮಂಗಲ ನಿವಾಸಿ ವಿವೇಕ್ ಶೆಟ್ಟಿ(28) ಬಾವಿಗೆ ಬಿದ್ದು, ಮೃತಪಟ್ಟಿದ್ದಾರೆ. ಬಾವಿಗೆ ಹಾರುವುದನ್ನು ಕಂಡ ಇವರ ಸಹೋದರ ತೇಜಸ್, ಇವರನ್ನು ರಕ್ಷಿಸುವ ನಿಟ್ಟಿನಲ್ಲಿ ಬಾವಿಗೆ ಧುಮುಕಿದ್ದು, ಮೇಲೆ ಬರಲಾಗದೆ ಸಿಲುಕಿಕೊಂಡಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿಯನ್ವಯ ಅಗ್ನಿಶಾಮಕ ದಳ ಸಿಬ್ಬಂದಿ ಇಬ್ಬರನ್ನೂ ಮೇಲಕ್ಕೆತ್ತಿ ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಿದರೂ, ವಿವೇಕ್ ಶೆಟ್ಟಿ ಅವರನ್ನು ರಕ್ಷಿಸಲಾಗಿಲ್ಲ.
ಅಳತೆ ಮತ್ತು ತೂಕ ಇಲಾಖೆಯಲ್ಲಿ ಸೀನಿಯರ್ ಕ್ಲರ್ಕ್ ಆಗಿದ್ದ ವಿವೇಕ್ ಶೆಟ್ಟಿ, ಭಾನುವಾರ ರಾತ್ರಿ ಮನೆ ಸನಿಹದ ಬಾವಿಗೆ ಹಾರಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


