ಕಾಸರಗೋಡು: ನಗರದ ಪಿಲಿಕುಂಜೆ ಶ್ರೀ ಜಗದಂಬಾ ದೇವಿ ದೇವಸ್ಥಾನದ ಸೇವಾ ಕೌಂಟರ್, ಕಚೇರಿ, ದಾಸ್ತಾನು ಕೊಠಡಿ ಬಾಗಿಲು ಒಡೆಯಲಾಗಿದ್ದು, ಸೇವಾಕೌಂಟರ್‍ನಿಂದ 1ಸಾವಿರ ರಊ. ನಗದು ಕಳವುಗೈಯಲಾಗಿದೆ. ಕಚೇರಿಯ ಸಿಸಿಕ್ಯಾಮರಾದ ಹಾರ್ಡ್ ಡಿಸ್ಕ್, ಧ್ವನಿವರ್ಧಕದ ಆಂಪ್ಲಿಫಯರ್ ಕಳವು ನಡೆಸಿದ್ದರೂ, ಇದನ್ನು ದೇಗುಲ ವಠಾರದಿಂದ ಪತ್ತೆಹಚ್ಚಲಾಗಿದೆ. ಹಾರ್ಡ್‍ಡಿಸ್ಕನ್ನು ಬಾವಿಗೆಸೆದ ಸ್ಥಿತಿಯಲ್ಲಿತ್ತು. ಈ ಬಗ್ಗೆ ಸಮಿತಿ ಕಾರ್ಯದರ್ಶಿ ಸಜಿತ್ ಕುಮಾರ್ ನೀಡಿದ ದೂರಿನನ್ವಯ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಬೆರಳಚ್ಚು ತಂಡ ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದೆ.

