HEALTH TIPS

ದೊಡ್ಡ ಬಜೆಟ್‌ ಸಿನಿಮಾ: ಆದಾಯ ಹಂಚಿಕೆಗೆ ಟಿಎಫ್‌ಟಿಸಿ ನಿರ್ಣಯ

ಚೆನ್ನೈ: ದೊಡ್ಡ ‌ಬಜೆಟ್‌ ಸಿನಿಮಾಗಳು ಆದಾಯ ಹಂಚಿಕೆ ಆಧಾರದಲ್ಲಿ ನಿರ್ಮಾಣವಾಗಬೇಕು. ಚಿತ್ರದ ಲಾಭ, ನಷ್ಟಗಳೆರಡೂ ನಟರು ಹಾಗೂ ತಂತ್ರಜ್ಞರ ನಡುವೆ ಹಂಚಿಕೆಯಾಗಬೇಕು ಎಂದು ತಮಿಳು ಚಿತ್ರ ನಿರ್ಮಾಪಕರ ಸಂಘವು (ಟಿಎಫ್‌ಟಿಸಿ) ಭಾನುವಾರ ನಿರ್ಧರಿಸಿದೆ. 

ಚೆನ್ನೈನಲ್ಲಿ ನಡೆದ ಸಂಘದ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದು, ಈ ಬಗ್ಗೆ ಅದು ಪ್ರಕಟಣೆ ಹೊರಡಿಸಿದೆ.

ಚಿತ್ರಮಂದಿರಗಳಿಂದ ಬರುವ ಆದಾಯ ಕಡಿಮೆಯಾಗುತ್ತಿದೆ. ಒಟಿಟಿ (ಓವರ್‌ ದಿ ಟಾಪ್‌) ಹಾಗೂ ಸ್ಯಾಟ್‌ಲೈಟ್‌ ವ್ಯವಹಾರಗಳಿಂದ ಉಂಟಾಗುವ ಆರ್ಥಿಕ ಒತ್ತಡವನ್ನು ಪರಿಹರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ಹೇಳಿದೆ.

ಚಿತ್ರಮಂದಿರಗಳಿಂದ ಬರುವ ಆದಾಯವನ್ನು ಕಾಪಾಡಿಕೊಳ್ಳಲು ಒಟಿಟಿಯಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡಲು ಕಾಲಾವಧಿಯನ್ನು ನಿಗದಿಪಡಿಸಲೂ ನಿರ್ಧರಿಸಲಾಗಿದೆ.

ಖ್ಯಾತ ನಟ-ನಟಿಯರು ನಟಿಸಿರುವ ಸಿನಿಮಾಗಳು ಬಿಡುಗಡೆಯಾದ 8 ವಾರಗಳ ನಂತರ ಒಟಿಟಿಯಲ್ಲಿ ಬಿಡುಗಡೆಯಾಗಬೇಕು. ಹಾಗೆಯೇ, ಸಾಧಾರಣ ಜನಪ್ರಿಯತೆ ಇರುವ ನಟ-ನಟಿಯರ ಸಿನಿಮಾಗಳು ತೆರೆಕಂಡ 6 ವಾರಗಳ ನಂತರ ಹಾಗೂ ಕಡಿಮೆ ಬಜೆಟ್‌ ಸಿನಿಮಾಗಳನ್ನು ಬಿಡುಗಡೆಯಾದ 4 ವಾರಗಳ ನಂತರ ಒಟಿಟಿಯಲ್ಲಿ ಪ್ರಸಾರ ಮಾಡಬೇಕು ಎಂದು ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries