ಕುಂಬಳೆ: ಕೊಡ್ಯಮೆ ಜಮಾತ್ ಮಸೀದಿಯ ಅಂಗಳದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಅವರ ವಾರ್ಷಿಕ ಸ್ಮರಣೆ ಹಾಗೂ ಧಾರ್ಮಿಕ ಪ್ರವಚನ ಡಿ.21 ರಿಂದ 28 ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಪದಾಧಿಕಾರಿಗಳು ನಿನ್ನೆ ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
19ರ(ಇಂದು) ಶುಕ್ರವಾರ ಮಧ್ಯಾಹ್ನ 1.30ಕ್ಕೆ ಮಹ್ಮದ್ ಸಅದಿ ಮಕಾಂ ಝಿಯಾರತ್‍ಗೆ ಚಾಲನೆ ನೀಡಲಿದ್ದಾರೆ. ಬಳಿಕ ಜಮಾತ್ ಅಧ್ಯಕ್ಷ ಎಂ.ಎಂ.ಕೆ. ಮೊಯ್ದು ಹಾಜಿ ಧ್ವಜಾರೋಹಣ ನೆರವೇರಿಸುವರು.
21ರ ಭಾನುವಾರ ರಾತ್ರಿ 8 ಗಂಟೆಗೆ ಪಾಣಕ್ಕಾಡ್ ಹಮೀದಲಿ ಶಿಹಾಬ್ ತಂಙಳ್ ಉದ್ಘಾಟಿಸುವರು. ಎಂ.ಎಂ.ಕೆ. ಮೊಯ್ದು ಹಾಜಿ ಅಧ್ಯಕ್ಷತೆ ವಹಿಸುವರು. ಶೌಕತ್ತಲಿ ವೆಲ್ಲಮುಂಡ ಪ್ರಧಾನ ಭಾಷಣ ಮಾಡಲಿದ್ದಾರೆ. ಮುಹಮ್ಮದ್ ಸಲೀಂ ಅಹ್ಸನಿ ಪ್ರಾರ್ಥನೆ ನಿರ್ವಹಿಸುವರು. ಜಮಾತ್ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಪೂಕಟ್ಟ ಉಪಸ್ಥಿತರಿರುವರು. ಜಲಾಲಿಯ ರಾತೀಬ್ ನೇತೃತ್ವವನ್ನು ಕೆ.ಎಸ್. ಜಾಫರ್ ಸ್ವಾದಿಖ್ ತಂಙಳ್ ಕುಂಬೋಳ್, ಹಾಗೂ ಮದನಿಯಂ ಮಜ್ಲಿಸ್ ಗೆ ಅಬ್ದುಲ್ ಲತೀಫ್ ಸಖಾಫಿ ನೇತೃತ್ವ ವಹಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಉಚಿತ ವೈದ್ಯಕೀಯ ಶಿಬಿರ, ಮಹಲ್ ಸಂಗಮ, ಪ್ರವಾಸಿ ಕುಟುಂಬ ಸಭೆ, ಬುರ್ದಾ ಮಜ್ಲಿಸ್, ಹಳೆ ವಿದ್ಯಾರ್ಥಿಗಳ ಸಮಾವೇಶ ನಡೆಯಲಿದೆ.
ವಿವಿಧ ದಿನಗಳಲ್ಲಿ, ಇಪಿ ಅಬೂಬಕರ್ ಅಲ್ ಖಾಸಿಮಿ ಪತ್ತನಾಪುರಂ, ಎನ್.ಪಿ.ಎಂ ಶರಫುದ್ದೀನ್ ತಂಙಳ್ ಅಲ್ ಹಾದಿ ರಬ್ಬಾನಿ ಕುನ್ನುಂಗೈ, ಪೆರೋಡ್ ಮುಹಮ್ಮದ್ ಅಝ್ಹರಿ, ಹಸನುಲ್ ಅಹ್ದಲ್ ತಂಙಳ್ ಮುಹಿಮ್ಮತ್, ಹಂಝ ಮಿಸ್ಬಾಹಿ ಒಟ್ಟಪದವು, ಯಹಿಯಾ ತಂಙಳ್ ಅಲ್ ಹಾದಿ ಕುಂಬೋಳ್ ಮತ್ತು ಉಸ್ಮಾನ್ ಜೌಹರಿ ನೆಲ್ಯಾಡಿ ಮಾತನಾಡಲಿದ್ದಾರೆ.
27ರ ಶನಿವಾರ ರಾತ್ರಿ 8.30ಕ್ಕೆ ಸಮಾರೋಪ ಸಭೆಯನ್ನು ಶಿಹಾಬುದ್ದೀನ್ ತಂಙಳ್ ಮುತ್ತನೂರ ಉದ್ಘಾಟಿಸುವರು. ಅಬ್ದುಲ್ ಮಜೀದ್ ಫೈಝಿ ಅಧ್ಯಕ್ಷತೆ ವಹಿಸುವರು.
ಶಫೀಕ್ ಬದ್ರಿ ಅಲ್ ಬಾಖವಿ ಕಡಕಲ್ ಮುಖ್ಯ ಭಾಷಣ ಮಾಡಲಿದ್ದಾರೆ. ಹಾದಿ ಕೆ.ಎಸ್. ತಂಙಳ್ ಮೊಗ್ರಾಲ್ ಪ್ರಾರ್ಥನೆ ನೆರವೇರಿಸುವರು. 28ರ ಭಾನುವಾರ ಬೆಳಗ್ಗೆ 11 ಗಂಟೆಗೆ ಮೌಲಿದ್ ಮಜ್ಲಿಸ್ ಗೆ ಆಟಕೋಯ ತಂಙಳ್ ಕುಂಬೋಲ್ ನೇತೃತ್ವ ವಹಿಸಲಿದ್ದಾರೆ.
ಜಮಾಅತ್ ಖತೀಬ್ ಮಹ್ಮದ್ ಸಅದಿ, ಉಪಾಧ್ಯಕ್ಷ ಮುಹಮ್ಮದ್ ಕುಂಞÂ್ಞ ಹಾಜಿ ಚಿರ್ತಾಡಿ, ಕೋಶಾಧಿಕಾರಿ ಕೆ.ಕೆ. ಅಬ್ಬಾಸ್ ಹಾಜಿ, ಪ್ರಚಾರ ಸಮಿತಿ ಅಧ್ಯಕ್ಷ ಕೆ.ಬಿ. ಯೂಸುಫ್, ಕಾರ್ಯದರ್ಶಿಗಳಾದ ಅಬ್ಬಾಸ್ ಮಾಸ್ತರ್, ಕರೀಂ ಮಾಸ್ತರ್ ದರ್ಬಾರ್ಕಟ್ಟೆ ಮತ್ತು ಗಲ್ಫ್ ಪ್ರತಿನಿಧಿ ಇಬ್ರಾಹಿಂ ಉಕಿಣಿ ಪಲ್ಲತ್ತಿಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


