ಮಂಜೇಶ್ವರ: ಉತ್ತರ ಕೇರಳದ ಅತ್ಯಂತ ಪ್ರಸಿದ್ಧವಾದ ಉದ್ಯಾವರ ಸಾವಿರ ಜಮಾಅತ್ ಆವರಣದಲ್ಲಿ ಅಂತ್ಯವಿಶ್ರಾಂತಿ ಹೊಂದಿರುವ ಪವಿತ್ರಾತ್ಮರಾದ 'ಅಸ್ಸಯ್ಯಿದ್ ಶಹೀದ್ ವಲಿಯುಲ್ಲಾಹಿ (ರ.ಅ)' ಅವರ ನಾಮದೇಯದಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಉದಯಾಸ್ತಮ ನ ಉರೂಸ್‍ಗೆ ಡಿಸೆಂಬರ್ 19ರಂದು ದ್ವಜಾರೋಹಣ ನಡೆಯಲಿದೆ.
ಡಿಸೆಂಬರ್ 19ರಂದು (ಶುಕ್ರವಾರ) ಮಧ್ಯಾಹ್ನ ಜುಮಾ ನಮಾಜಿನ ನಂತರ, ಸಾವಿರಾರು ಜನರ ಉಪಸ್ಥಿತಿಯಲ್ಲಿ ದರ್ಗಾ ಶರೀಫ್ ಸಮಿತಿ ಅಧ್ಯಕ್ಷ ಹಾಗೂ ಉರೂಸ್ ಸಮಿತಿಯ ಮುಖ್ಯ ಸಲಹೆಗಾರ ಸಯ್ಯಿದ್ ಪೂಕ್ಕುಂನ್ನಿ ತಂಗಳ್ ಉದ್ಯಾವರ ಧ್ವಜಾರೋಹಣ ನಡೆಸುವರು ಎಂದು ಉರೂಸ್ ಸಮಿತಿ ಅಧ್ಯಕ್ಷ ಸಯ್ಯಿದ್ ಯು.ಕೆ. ಸೈಫುಲ್ಲಾ ತಂಙಳ್ ಅಲ್-ಬುಖಾರಿ ಗುರುವಾರ ಸಂಜೆ ಜಮಾಅತ್ ಆವರಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 25ರಂದು (ಗುರುವಾರ) ರಾತ್ರಿ 8:30ಕ್ಕೆ ಉರೂಸ್ ಸಮಿತಿಯ ಮುಖ್ಯ ರಕ್ಷಾಧಿಕಾರಿ ಸಯ್ಯಿದ್ ಅತಾವುಲ್ಲಾ ತಂಗಳ್ ಎಂ.ಎ. ಅವರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಭೆಯನ್ನು ಗ್ರ್ಯಾಂಡ್ ಮುಫ್ತಿ ಆಫ್ ಇಂಡಿಯಾ, ಸುಲ್ತಾನುಲ್ ಉಲಮ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಅದೇ ದಿನ ನಡೆಯುವ ಪ್ರಾರ್ಥನ ಮಜ್ಲಿಸಿಗೆ ಬದರುಸ್ಸಾದಾತ್ ಅಸ್ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ ಕಡಲುಂಡಿ ತಂಗಳ್ ನೇತೃತ್ವ ನೀಡಲಿದ್ದು, ಪ್ರಮುಖ ಭಾಷಣಕಾರ ಫಾರೂಕ್ ನಈಮಿ ಮದ್ ಹುರಸೂಲ್ ಪ್ರವಚನ ನೀಡಲಿದ್ದಾರೆ.
ಉರೂಸ್ ಅಂಗವಾಗಿ ಡಿಸೆಂಬರ್ 25ರಿಂದ ಜನವರಿ 3ರವರೆಗೆ ನಡೆಯುವ ಧಾರ್ಮಿಕ ಸಮ್ಮೇಳನಗಳಲ್ಲಿ ಪ್ರಸಿದ್ದ ಸಾದಾತ್‍ಗಳು ಭಾಗವಹಿಸಲಿದ್ದಾರೆ.
ಡಿಸೆಂಬರ್ 28ರಂದು ಬೆಳಿಗ್ಗೆ 9 ಗಂಟೆಯಿಂದ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದೆ.
ಜನವರಿ 3ರಂದು ಸಂಜೆ 3 ಗಂಟೆಗೆ ಆರಂಭವಾಗುವ ಮಾನವ ಸೌಹಾರ್ದ ಸಮಾವೇಶದಲ್ಲಿ ಪ್ರಮುಖ ಮಾನವ ಹಕ್ಕು ಕಾರ್ಯಕರ್ತರು, ವಾಗ್ಮಿಗಳು ಹಾಗೂ ಧಾರ್ಮಿಕ-ಸಾಮಾಜಿಕ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.
ಡಿಸೆಂಬರ್ 28ರ ರಾತ್ರಿ ಸಾವಿರಾರು ಭಕ್ತರು ಭಾಗವಹಿಸುವ ಝಿಕ್ರ್ ಮಜ್ಲಿಸಿಗೆ ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಕಲ್ಲರಕಲ್ ತಂಙಳ್ ನೇತೃತ್ವ ನೀಡಲಿದ್ದಾರೆ. ಡಿಸೆಂಬರ್ 29ರ ರಾತ್ರಿ ನಡೆಯುವ ಗ್ರ್ಯಾಂಡ್ ಬುರ್ಡಾ ಮಜ್ಲಿಸಿಗೆ ಸಯ್ಯಿದ್ ತ್ವಾಹಾ ತಂಙಳ್ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ವ್ಯಕ್ತಿತ್ವಗಳು ಭಾಗವಹಿಸಲಿದ್ದಾರೆ.
ಉರೂಸ್ ಅಂಗವಾಗಿ ನಡೆಯುವ ಪ್ರಾರ್ಥನಾ ಮಜ್ಲಿಸ್ ಹಾಗೂ ಪ್ರವಚನ ಕಾರ್ಯಕ್ರಮಗಳಲ್ಲಿ ಸಯ್ಯಿದ್ ಅಲಿ ತಂಙಳ್ (ಕುಂಬೋಳ್), ಸಯ್ಯಿದ್ ಶಹೀರ್ ಅಲ್ ಬುಖಾರಿ (ಮಲ್ಹರ್), ಸಯ್ಯಿದ್ ಜಲಾಲುದ್ದೀನ್ ಅಲ್ ಬುಖಾರಿ, ಸಯ್ಯಿದ್ ಅಬೂಬಕ್ಕರ್ ಮೌಲಾನಾ ತಂಙಳ್ ಸಯ್ಯಿದ್ ಹಮೀದ್ ತಂಙಳ್, ಸಯ್ಯಿದ್ ಹಾಮಿದ್ ಮಿಸ್ಬಾಹಿ ತಂóಳ್, ಸಯ್ಯಿದ್ ಜಲಾಲುದ್ದೀನ್ ಅಲ್ ಹಾದಿ (ಉಜಿರೆ)ತಂಙಳ್, ಸಯ್ಯಿದ್ ಹಾಮಿದ್ ಕೋಯಮ್ಮ ಅಲ್ ಜಲಾಲಿ (ದಾರುಲ್ ಹಮ್ದ್), ಸಯ್ಯಿದ್ ಅಬ್ದುರಹ್ಮಾನ್ ಮಸ್ ಊದ್ ಅಲ್ ಬುಖಾರಿ (ಕೂರತ್), ಸಯ್ಯಿದ್ ಫರೀದುದ್ದೀನ್ ಪೂಕ್ಕೋಯ ತಂಙಳ್ ಸಯ್ಯಿದ್ ನೂರಿಷಾ ತಂಙಳ್, ಪೇರೋಡ್ ಅಬ್ದುರಹ್ಮಾನ್ ಸಖಾಫಿ, ಬಂಬ್ರಾಣ ಅಬ್ದುಲ್ ಖಾದರ್ ಖಾಸಿಮಿ, ಯಾಸೀನ್ ಜೌಹರಿ (ಕೊಲ್ಲಂ), ಜಲೀಲ್ ರಹ್ಮಾನಿ (ವಾಣಿಯನ್ನೂರು), ಅನ್ವರ್ ಮುಹಿಯುದ್ದೀನ್ ಹುದವಿ, ಶಮೀರ್ ದಾರಿಮಿ (ಕೊಲ್ಲಂ), ಅಬ್ದುಲ್ ಖಾದರ್ ದಾರಿಮಿ (ಕುಕ್ಕಿಲ, ಹುಸೈನ್ ಸಅದಿ (ಕೆ.ಸಿ. ರೋಡ್), ಅಬ್ದುಲ್ ಕರೀಂ ದಾರಿಮಿ ಕೊಲ್ಲಂ, ಉದ್ಯಾವರ ಸಾವಿರ ಜಮಾಅತ್ ಮುದರಿಸ್ ಬಿ.ಎನ್. ಅಬ್ದುಲ್ ಖಾದರ್ ಮದನಿ, ಹಾಗೂ ಸಾವಿರ ಜಮಾಅತ್ ಖತೀಬ್ ಅಶ್ರಫ್ ಫೈಝಿ ಮೊದಲಾದವರು ನೇತೃತ್ವ ವಹಿಸಲಿದ್ದಾರೆ.
ಜನವರಿ 3ರ ರಾತ್ರಿ 8:30ಕ್ಕೆ ನಡೆಯುವ ಸಮಾರೋಪ ಸಭೆಯನ್ನು ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮ ಅಧ್ಯಕ್ಷ, ಸಾವಿರ ಜಮಾಅತ್ ಸಂಯುಕ್ತ ಖಾಜಿ ಸಯ್ಯಿದುಲ್ ಉಲಮ ಅಸ್ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಅದೇ ದಿನ ನಡೆಯುವ ಪ್ರಾರ್ಥನಾ ಮಜ್ಲಿಸಿಗೆ ಸಯ್ಯಿದ್ ಸುಹೈಲ್ ಸಖಾಫ್ ತಂಙಳ್ (ಮಡಕ್ಕರ) ನೇತೃತ್ವ ನೀಡಲಿದ್ದಾರೆ. ಕೇರಳದ ಕುಮ್ಮನಂ ನಿಸಾಮುದ್ದೀನ್ ಅಝ್ಹರಿ ಮುಖ್ಯ ಭಾಷಣ ಮಾಡಲಿದ್ದಾರೆ.
ಡಿಸೆಂಬರ್ 4ರಂದು ಬೆಳಿಗ್ಗೆ ಪ್ರಭಾತ ನಮಾಜಿನ ನಂತರದಿಂದ ಅಸ್ತಮಾನದವರೆಗೆ ಲಕ್ಷಾಂತರ ಭಕ್ತರಿಗೆ ಅನ್ನದಾನವನ್ನು ಆಯೋಜಿಸಲಾಗಿದೆ ಎಂದು ಉರೂಸ್ ಸಮಿತಿ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಸಮಿತಿ ಪದಾಧಿಕಾರಿಗಳಾದ ಸಯ್ಯಿದ್ ಮುಹಮ್ಮದ್ ಅತ್ತಾವುಲ್ಲಾ ತಂಙಳ್, ಇಬ್ರಾಹಿಂ ಬಟರ್ ಫ್ಲೈ, ಪಳ್ಳಿಕುಂಞÂ ಹಾಜಿ, ಇಬ್ರಾಹಿಂ ಫೈಝಿ, ಅಬ್ದುಲ್ ಕಾದರ್ ಫಾರೂಕ್, ಅಹ್ಮದ್ ಭಾವ ಹಾಜಿ, ಇಬ್ರಾಹಿಂ ಉಮರ್ ಹಾಜಿ. ಅಲಿಕುಟ್ಟಿ ನೇಷನಲ್, ಹೊಸೂರ್ ರಹ್ಮಾನ್, ಮುಕ್ತಾರ್. ಎ ಶರೀಫ್, ಮೂಸ ಯುಕೆ ಮೊದಲಾದವರು ಉಪಸ್ಥಿತರಿದ್ದರು.



