ಕೋಝಿಕೋಡ್: ಸ್ಥಳೀಯಾಡಳಿತ ಸಂಸ್ಥೆಗಳ ಎರಡನೇ ಹಂತದ ಚುನಾವಣೆಯಲ್ಲಿ ಉತ್ತಮ ಮತದಾನ ನಡೆದಿರುವುದು ಮಧ್ಯಾಹ್ನ ವೇಳೆಯ ವರದಿ ದೃಢಪಡಿಸಿದೆ. ತ್ರಿಶೂರ್ ನಿಂದ ಕಾಸರಗೋಡುವರೆಗಿನ ಏಳು ಜಿಲ್ಲೆಗಳಲ್ಲಿ ಮತದಾನ ಶೇಕಡಾ 50 ದಾಟಿದೆ.
ಜಿಲ್ಲೆಗಳಲ್ಲಿ ಮಲಪ್ಪುರಂ ಮುನ್ನಡೆಯಲ್ಲಿದೆ. ಮಹಾನಗರ ಪಾಲಿಕೆಯಲ್ಲಿ ಕೋಝಿಕೋಡ್ ಶೇ. 38 ರೊಂದಿಗೆ ಮುಂದಿದೆ. ಹಲವು ಬೂತ್‍ಗಳಲ್ಲಿ ಜನರ ದೀರ್ಘ ಸರತಿ ಸಾಲುಗಳಿವೆ.
ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದೆ. ಮತದಾನದ ಸಮಯ ಮುಗಿದ ಬಳಿಕ ಸರತಿ ಸಾಲಿನಲ್ಲಿ ನಿಂತಿದ್ದ ಎಲ್ಲರಿಗೂ ಮತ ಚಲಾಯಿಸಲು ಅವಕಾಶ ನೀಡಲಾಗುವುದು.
ಮೊನ್ನೆ, ಮೊದಲ ಹಂತದ ಮತದಾನದ ವೇಳೆ ಮತ ಯಂತ್ರ ಕೆಟ್ಟುಹೋದ ಆಲಪ್ಪುಳ ಮಣ್ಣಂಚೇರಿ ಸರ್ಕಾರಿ ಪ್ರೌಢಶಾಲೆಯ ಮತಗಟ್ಟೆಯಲ್ಲಿಯೂ ಇಂದು ಮರು ಮತದಾನ ನಡೆಯುತ್ತಿದೆ. ಎಲ್ಲೆಡೆ ಮತ ಎಣಿಕೆ ನಡೆಯಲಿದೆ.

