ಬದಿಯಡ್ಕ: ಬೇಳ ಸಮೀಪದ ಕಟ್ಟತ್ತಂಗಡಿಯಲ್ಲಿ ಹುಚ್ಚು ನಾಯಿಯೊಂದು ವ್ಯಾಪಕವಾಗಿ ಹಲವರಿಗೆ ಕಡಿದಿರುವುದು ವರದಿಯಾಗಿದೆ. ಕಟ್ಟತ್ತಂಗಡಿಯ ಪ್ರಸನ್ನ(45), ಸಿರಿಲ್ ಮಾಸ್ತರ್(50), ಸ್ಟೀಫನ್(40), ಮೇರಿ ಮೊಂತೇರೊ(60) ಎಂಬವರು ನಾಯಿ ಕಡಿತಕ್ಕೊಳಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ರಾತ್ರಿ ಕಟ್ಟತ್ತಂಗಡಿಯಲ್ಲಿ ಹುಚ್ಚುನಾಯಿ ನಡೆದು ಸಾಗುತ್ತಿದ್ದವರು ಮತ್ತು ಅಂಗಡಿಯಿಂದ ದಿನಸಿ ಸಾಮಗ್ರಿ ಖರೀದಿಸಿ ತೆರಳುವವರ ಮೇಲೆ ದಾಳಿ ಮಾಡಿದೆ. ಬಳಿಕ ಕಿಳಿಂಗಾರ್ ಪ್ರದೇಶದತ್ತ ತೆರಳಿ ಅಲ್ಲಿಯೂ ಹಲವರಿಗೆ ಕಚ್ಚಿದೆಯೆಂದು ವರದಿಯಾಗಿದೆ.
ಕಟ್ಟತ್ತಂಗಡಿ ಪ್ರದೇಶದಲ್ಲಿ ಇತ್ತೀಚೆಗೆ ಬೀದಿನಾಯಿಗಳ ಕಾಟ ವ್ಯಾಪಕಗೊಂಡಿದ್ದು, ಗುಂಪುಗಳಾಗಿ ಠಳಾಯಿಸುವುದು, ರಸ್ತೆಯ ಆಚೀಚೆ ಓಡಾಡುವುದರಿಂದ ವಾಹನ ಸವಾರರೂ ಸಂಕಷ್ಟಕ್ಕೊಳಗಾಗುತ್ತಿರುವ ಬಗ್ಗೆ ಈಗಾಗಲೇ ದೂರಲಾಗಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ನಾಗರಿಕರು ಒತ್ತಾಯಿಸಿದ್ದಾರೆ.

.jpg)
.jpg)
.jpg)
