ಮುಳ್ಳೇರಿಯ: ಭಾರತೀಯ ವಿದ್ಯಾನಿಕೇತನ ಕೇರಳ ಜಿಲ್ಲಾ ಸಮಿತಿ ವತಿಯಿಂದ ಬೋವಿಕ್ಕಾನದ ಸರಸ್ವತಿ ವಿದ್ಯಾಲಯದಲ್ಲಿ ಮಾತೃಭಾರತಿ ಸಪ್ತಶಕ್ತಿ ಸಂಗಮವನ್ನು ಆಯೋಜಿಸಲಾಯಿತು. ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ವಿಶಾಲಾಕ್ಷಿ ದೇವಿ ಸಮಾರಂಭ ಉದ್ಘಾಟಿಸಿದರು.
ಭಾರತೀಯ ವಿದ್ಯಾನಿಕೇತನದ ಜಿಲ್ಲಾ ಜತೆ ಕಾರ್ಯದರ್ಶಿ ಅಂಬಿಕಾ ಅರವಿಂದ್ ಅಧ್ಯಕ್ಷತೆ ವಹಿಸಿದ್ದರು. ಮಾತೃ ಸಮಿತಿಯ ಮಾಜಿ ಅಧ್ಯಕ್ಷೆ, ಮಾತೃ ಸಮಿತಿ ಸದಸ್ಯೆ ಕೆ. ಶಾಲಿನಿ ಮತ್ತು ರಮ್ಯಾ ಉಪಸ್ಥಿತರಿದ್ದರು. ಈ ಸಂದರ್ಭ ತಾಯಂದಿರಿಗೆ ವಿವಿಧ ತರಗತಿ ನಡೆಸಲಾಯಿತು. ಶ್ರೀಲೇಖಾ, ನಿಶಾ, ಸರಿತಾ ಮಲ್ಲಂ, ರಸ್ನಾ, ಭವ್ಯ, ಅಶ್ವತಿ, ಚೈತ್ರ, ಕೆ, ಅನಿತಾ ಮೊದಲಾದವರು ವಿವಿಧ ವಿಷಯಗಳ ಕುರಿತು ತಾಯಂದಿರಿಗೆ ತರಗತಿ ನಡೆಸಿದರು. ಸಭೆಯಲ್ಲಿ ಹಿರಿಯ ತಾಯಂದಿರನ್ನು ಸನ್ಮಾನಿಸಲಾಯಿತು. ತಾಯಂದಿರ ಸಮಿತಿ ಸದಸ್ಯೆ ಸರಿತಾ ಶಿವನ್ ಅವರು ವೈಯಕ್ತಿಕ ಹಾಡುಹಾಡಿದರು. ಬೋವಿಕ್ಕಾನದ ಸರಸ್ವತಿ ವಿದ್ಯಾಲಯದ ಶಿಕ್ಷಕಿ ಕೆ.ಸುಜಿತಾ ಸ್ವಾಗತಿಸಿದರು. ಪ್ರಜಿತಾ ವಂದಿಸಿದರು.

