ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಲ್ಲಿ ಕಾಸರಗೋಡು ನಗರಸಭೆಗೆ ನಗರದ ಹೃದಯ ಭಾಗವಾದ ತಾಲೂಕು ಕಛೇರಿ ಭಾಗ 33 ನೇ ವಾರ್ಡಿನಲ್ಲಿ ಸ್ಪರ್ಧಿಸಿ ಅಧಿಕ ಬಹುಮತದಿಂದ ಚುನಾಯಿತರಾದ ಕೆ.ಎನ್.ರಾಮಕೃಷ್ಣ ಹೊಳ್ಳ ಅವರ ಗೆಲುವಿನ ಅಂಗವಾಗಿ ನಗರದಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಲಾಯಿತು.
ಈಸಂದರ್ಭ ಮತದಾರರ ಮನೆಗಳಿಗೆ ತೆರಳಿ ಸಿಹಿ ವಿತರಿಸಲಾಯಿತು. ಸಂಘಟನೆಯ ಹಿರಿಯ ಕಾರ್ಯಕರ್ತ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಮಾಜಿ ನಗರಸಭಾ ಸದಸ್ಯರಾದ ಶ್ರೀಲತಾ ಟೀಚರ್, ವಿಜಯ ಶೆಟ್ಟಿ, ಕಾರ್ಯಕರ್ತರಾದ ಕೆ.ವಿ. ಶ್ರೀನಿವಾಸ ಹೊಳ್ಳ, ಕಿಶೋರ್ ಕುಮಾರ್, ಸಂತೋಷ್ ಭಂಡಾರಿ, ವಸಂತ್ ಕೆರೆಮನೆ, ಜಿತಿನ್ ರಾಜ್ ಶೆಟ್ಟಿ, ಭರತ್ ರಾಜ್ ಶೆಟ್ಟಿ ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಮಡಿದ್ದರು. ಕೆ.ವಿ. ತಿರುಮಲೇಶ ಹೊಳ್ಳ, ಕೆ.ವಿ.ಶೇಷಾದ್ರಿ ಹೊಳ್ಳ, ಪ್ರಜ್ವಲ್, ಅನುರಾಜ್ ಇವರ ನಾಸಿಕ್ ಬ್ಯಾಂಡ್ ಮೆರವಣಿಗೆಗೆನೇತೃಥ್ವ ನೀಡಿದರು.


