ತಿರುವನಂತಪುರಂ: ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ದೃಢಪಟ್ಟ ಬಳಿಕ, ಜಾಗರೂಕತೆಯ ಸಲಹೆಯನ್ನು ನೀಡಲಾಗಿದೆ.
ಸಚಿವೆ ವೀಣಾ ಜಾರ್ಜ್ ನೇತೃತ್ವದ ರಾಜ್ಯ ಮಟ್ಟದ ಕ್ಷಿಪ್ರ ಪ್ರತಿಕ್ರಿಯೆ ತಂಡವು ಪರಿಸ್ಥಿತಿಯನ್ನು ನಿರ್ಣಯಿಸಲು ಸಭೆ ಸೇರಿತು. ಹಕ್ಕಿ ಜ್ವರ ಇನ್ನೂ ಮನುಷ್ಯರ ಮೇಲೆ ಪರಿಣಾಮ ಬೀರದಿದ್ದರೂ, ಆರಂಭಿಕ ಜಾಗೃತಿ ಅಗತ್ಯ ಎಂದು ಸಚಿವರು ಹೇಳಿದರು.
ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ತರಬೇತಿ ಪಡೆದ ಒನ್ ಹೆಲ್ತ್ ಕಮ್ಯುನಿಟಿ ಸ್ವಯಂಸೇವಕರು ಸಾರ್ವಜನಿಕ ಜಾಗೃತಿಯನ್ನು ಬಲಪಡಿಸುತ್ತಾರೆ. ತಡೆಗಟ್ಟುವ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆಯೂ ಸಚಿವರು ನಿರ್ದೇಶನ ನೀಡಿದರು.
ಜನರು ಸತ್ತ ಅಥವಾ ಅನಾÉೂೀಗ್ಯ ಪೀಡಿತ ಪಕ್ಷಿಗಳನ್ನು ನಿರ್ವಹಿಸಬಾರದು ಮತ್ತು ಚೆನ್ನಾಗಿ ಬೇಯಿಸಿದ ಮಾಂಸ ಮತ್ತು ಮೊಟ್ಟೆಗಳನ್ನು ಮಾತ್ರ ಸೇವಿಸಬೇಕೆಂದು ಶಿಫಾರಸು ಮಾಡಲಾಗಿದೆ. ಹಸಿ ಹಕ್ಕಿ ಮಾಂಸ ಮತ್ತು ಹಿಕ್ಕೆಗಳನ್ನು ನಿರ್ವಹಿಸುವ ಜನರು ಹೆಚ್ಚಿನ ಅಪಾಯದಲ್ಲಿದ್ದಾರೆ. ಅವರು ಮುಖಗವಸುಗಳು ಮತ್ತು ಕೈಗವಸುಗಳು ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಬಳಸಬೇಕು ಎಂದು ಶಿಫಾರಸು ಮಾಡಿದೆ.

