ಉಪ್ಪಳ: ಅಡ್ಕ ಶ್ರೀ ಭಗವತೀ ಮಹಿಳಾ ಸಂಘದ ವತಿಯಿಂದ ವಿಶೇಷ ಹೂವಿನ ಪೂಜೆ ಹಾಗೂ ಸನ್ಮಾನ ಕಾರ್ಯಕ್ರಮ ಅಡ್ಕ ಶ್ರೀ ಭಗವತೀ ಕ್ಷೇತ್ರದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷ ಪಿ.ಕೃಷ್ಣ ಅಡ್ಕ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಾಯಕ ಪ್ರಾಧ್ಯಾಪಿಕೆ ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ ಧಾರ್ಮಿಕ ಭಾಷಣ ಮಾಡಿದರು. ತೀಯಾ ಸಮಾಜ ಬೆಂಗಳೂರು ಪ್ರಧಾನ ಕಾರ್ಯದರ್ಶಿ ಸದಾನಂದ.ಕೆ, ಮಮತಾ ಶಶಿಧರ ಶೆಟ್ಟಿ ಗ್ರಾಮಚಾವಡಿ ಶಿರಿಯ, ಮಹಿಳಾ ಸಂಘದ ಅಧ್ಯಕ್ಷೆ ಅಮಿತಾ ಆನಂದ ವೀರನಗರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸುರೇಂದ್ರ ಕೊಪ್ಪಳ, ಚಂದ್ರಹಾಸ ಪೊನ್ನೆತ್ತೋಡು ಕಯ್ಯಾರು ಇವರನ್ನು ಸನ್ಮಾನಿಸಲಾಯಿತು. ರಜನಿ ಸುರೇಶ್ ಮುಟ್ಟಂ ಸ್ವಾಗತಿಸಿ, ಜೀಕ್ಷಿತಾ ಅಭಿಲಾಷ್ ವಂದಿಸಿದರು. ಮೋಹಿನಿ ಹರೀಶ್ ನಿರೂಪಿಸಿದರು.

.jpg)
