ಬದಿಯಡ್ಕ: ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದ ಪುನಃಪ್ರತಿಷ್ಠೆ ಕಾರ್ಯಕ್ರಮ ಮಾ. 01 ಮತ್ತು 02 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇದರ ಅಂಗವಾಗಿ ಸ್ವಾಗತ ಸಮಿತಿ ರೂಪೀಕರಣ ಸಭೆ ಡಿ. 14 ರಂದು ಬೆಳಗ್ಗೆ 9ಕ್ಕೆ ಶ್ರೀ ಕುಮಾರಸ್ವಾಮಿ ಮಂದಿರದಲ್ಲಿ ನಡೆಯಲಿದೆ. ಸಭೆಯಲ್ಲಿ ಎಲ್ಲಾ ಭಕ್ತ ಮಹಾಜನರು, ವಿವಿಧ ಭಜನಾ ಮಂದಿರಗಳ ಪದಾಧಿಕಾರಿಗಳು, ಮಾತೃ ಮಂಡಳಿ ಸದಸ್ಯರು, ಸಂಘ ಸಂಸ್ಥೆ ಗಳ ಸದಸ್ಯರು, ಶಿವಾಜಿ ಫ್ರೆಂಡ್ಸ್, ಶ್ರೀ ಧರ್ಮಶಾಸ್ತಾ ಮಿತ್ರಮಂಡಳಿ, ರುದ್ರ ಫ್ರೆಂಡ್ಸ್, ಗಣೇಶೋತ್ಸವ ಸಮಿತಿ, ಸಿಂಧೂರ ಯುವಕ ವೃಂದ, ಊರ ಪರ ಊರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

