HEALTH TIPS

ಸಿನಿಮಾ ಪ್ರವಾಸೋದ್ಯಮ ಯೋಜನೆ ಕೇರಳದ ಪ್ರವಾಸೋದ್ಯಮಕ್ಕೆ ಉತ್ತೇಜನ-ಸಚಿವ ಪಿ.ಎ. ಮುಹಮ್ಮದ್ ರಿಯಾಸ್

*ಬೇಕಲದಲ್ಲಿ 'ಬಾಂಬೆ' ಚಿತ್ರ ತಂಡದೊಂದಿಗೆ ಸಂವಾದ

ಕಾಸರಗೋಡು: ಚಲನಚಿತ್ರ ಪ್ರವಾಸೋದ್ಯಮ ಯೋಜನೆ ಕೇರಳದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೈಗೊಳ್ಳುತ್ತಿರುವ ಪ್ರಯತ್ನಗಳಿಗೆ ಮಹತ್ವದ ಕೊಡುಗೆಯಗಲಿರುವುದಾಗಿ ರಾಜ್ಯ ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಖಾತೆ ಸಚಿವ ಪಿ.ಎ. ಮುಹಮ್ಮದ್ ರಿಯಾಜ್ ತಿಳಿಸಿದ್ದಾರೆ.  

ಅವರು ಕಾಸರಗೋಡು ಬೇಕಲ್ ಫೆಸ್ಟ್ ಕಾರ್ಯಕ್ರಮದಲ್ಲಿಪಾಲ್ಗೊಳ್ಳಲು ಆಗಮಿಸಿದ್ದ 1995 ರ 'ಬಾಂಬೆ' ಚಿತ್ರದ ನಿರ್ದೇಶಕ ಮಣಿರತ್ನಂ, ನಾಯಕಿ ಮನೀಷಾ ಕೊಯಿರಾಲ ಮತ್ತು ಛಾಯಾಗ್ರಾಹಕ ರಾಜೀವ್ ಮೆನನ್ ಅವರೊಂದಿಗೆ ಬೇಕಲ್ ಕೋಟೆಗೆ ಭೇಟಿ ನೀಡಿದ ಸಂದರ್ಭ ಚಿತ್ರ ತಂಡದೊಂದಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. 


ಹಳೇ ಚಲನಚಿತ್ರ ಸ್ಥಳಗಳನ್ನು ಪುನರುಜ್ಜೀವನಗೊಳಿಸಲು ಕೇರಳವು ಚಲನಚಿತ್ರ ಪ್ರವಾಸೋದ್ಯಮ ಯೋಜನೆಯನ್ನು ಪ್ರಾರಂಭಿಸಲಿದೆ. ಜನರ ಬಳಿ ತಲುಪುವ ಮತ್ತು ಆ ಮೂಲಕ ಪ್ರವಾಸೋದ್ಯಮ ಅವಕಾಶಗಳನ್ನು ಸುಧಾರಿಸುವ ಪ್ರಯತ್ನದ ಅಂಗವಾಗಿ 30 ವರ್ಷಗಳ ನಂತರ ಇಂತಹ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ. ಈ ಮೂಲಕ, ಅಂತಾರಾಷ್ಟ್ರೀಯ ಪ್ರವಾಸಿತಾಣ ಬೇಕಲ ಮಾತ್ರವಲ್ಲ ಕೇರಳಾದ್ಯಂತ ಸಹಪ್ರವಾಸೋದ್ಯಮ ಚಟುವಟಿಕೆಗಳನ್ನು ಬಲಪಡಿಸಲು ಸಾಧ್ಯವಾಗಲಿದೆ. 30 ವರ್ಷಗಳ ನಂತರ, ತಮ್ಮ ನೆಚ್ಚಿನ ಚಿತ್ರ ಬಾಂಬೆ ಚಿತ್ರೀಕರಣಗೊಂಡ ಕಾಸರಗೋಡಿನ ಬೇಕಲಕೋಟೆಯಲ್ಲಿ ಮೂರೂ ಮಂದಿ ಕಲಾವಿದರು ಒಟ್ಟುಸೇರುವಂತಾಗಿರುವುದು ಸಂತೋಷದಾಐಕ ಎಂದು ತಿಳಿಸಿದರು.   

ಶಾಸಕ ಸಿ.ಎಚ್.ಕುಞಂಬು, ಬೇಕಲ್ ರೆಸಾಟ್ರ್ಸ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿಜಿನ್ ಪರಂಬತ್ ಪಾಲ್ಗೊಂಡಿದ್ದರು. 'ಬಾಂ¨'' ಚಿತ್ರದಲ್ಲಿ 'ಉಯಿರೇ...' ಎಂಬ ಪ್ರಸಿದ್ಧ ಹಾಡಿನ ದೃಶ್ಯಗಳನ್ನು ಚಿತ್ರೀಕರಿಸಿರುವ ಬೇಕಲ್ ಕೋಟೆಯನ್ನು ಚಲನಚಿತ್ರ ಪ್ರೇಕ್ಷಕರಿಗೆ ಪುನಃ ಪರಿಚಯಿಸಿ, ಮತ್ತು ಈ ಪ್ರದೇಶದ ಚಲನಚಿತ್ರ-ಪ್ರವಾಸೋದ್ಯಮ ಸಾಮಥ್ರ್ಯವನ್ನು ಬಲಪಡಿಸುವನಿಟ್ಟಿನಲ್ಲಿ ಕಾರ್ಯಕ್ರಮವನ್ನು ಬೇಕಲ್ ರೆಸಾಟ್ರ್ಸ್ ಅಭಿವೃದ್ಧಿ ನಿಗಮ (ಃಖಆಅ) ಮತ್ತು ಕೇರಳ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಆಯೋಜಿಸುತ್ತಿದೆ. ಇದೇ ಸಂದರ್ಭ ಖ್ಯಾತ ಚಲನಚಿತ್ರ ಕಲಾವಿದರ ಸಭೆಯೂ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries