ಬದಿಯಡ್ಕ: ನೀರ್ಚಾಲು ಕುಂಟಿಕಾನ ಮಾಡತ್ತಡ್ಕ ಶ್ರೀ ದೈವಗಳ ಸೇವಾಸಮಿತಿ ಹಾಗೂ ಹರಿಹರ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪನ್ ತಿರುವಿಳಕ್ ಮಹೋತ್ಸವ ಗುರುವಾರ ಪ್ರಾತಃಕಾಲ ಸಂಪನ್ನಗೊಂಡಿತು. ಊರಪರವೂರ ಅಯ್ಯಪ್ಪ ವ್ರತಧಾರಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಬುಧವಾರ ಸಂಜೆ ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದಿಂದ ಪಾಲೆಕೊಂಬು ಮೆರವಣಿಗೆ ಆರಂಭವಾಗಿ ರಾತ್ರಿ ಶ್ರೀ ಹರಿಹರಮಂದಿರದ ಅಂಗಣಕ್ಕೆ ತಲುಪಿತು. ಕುಣಿತ ಭಜನೆ, ಸಿಂಗಾರಿ ಮೇಳ, ಮುತ್ತುಕೊಡೆಗಳೊಂದಿಗೆ ಮೆರವಣಿಗೆ ಆಕರ್ಷಣೀಯವಾಗಿತ್ತು. ರಾತ್ರಿ ಮಹಾಪೂಜೆ, ಅಯ್ಯಪ್ಪನ್ ಪಾಟ್, ಪೊಲಿಪಾಟ್, ಪಾಲ್‍ಕಿಂಡಿ ಸೇವೆ, ಅಗ್ನಿಸೇವೆ, ತಿರಿ ಉಯಿಚ್ಚಿಲ್, ಅಯ್ಯಪ್ಪ ವಾವರ ಯುದ್ಧ, ವೇಣು ಮಾರಾರ್ ಮತ್ತು ಸಂಘ ಬಾಲುಶ್ಶೇರಿ ಕೋಝಿಕ್ಕೋಡು ಇವರ ನೇತೃತ್ವದಲ್ಲಿ ನಡೆಯಿತು.

.jpg)
