ಬದಿಯಡ್ಕ: ಕೇರಳ ರಾಜ್ಯ ಪಿಂಚಣಿದಾರರ ಸಂಘದ ಕುಂಬ್ಡಾಜೆ ಘಟಕದ ವತಿಯಿಂದ ಪೆನ್ಶನರ್ಸ್ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಡೆಪ್ಯೂಟಿ ತಹಸಿಲ್ದಾರ್ ಶ್ರೀಕೃಷ್ಣ ಭಟ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಪ್ರಾಂತ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಈಶ್ವರ ರಾವ್, ಜಿಲ್ಲಾಸಮಿತಿ ಸದಸ್ಯ ಶ್ರೀಧರ್ ಭಟ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ಸೀತಾರಾಮ ರಾವ್, ಬ್ಲಾಕ್ ಸಮಿತಿ ಸದಸ್ಯ ವೆಂಕಟ್ರಮಣ ಕೆದಿಲಾಯ, ಪಂಚಾಯಿತಿ ಸಮಿತಿ ಕಾರ್ಯದರ್ಶಿ ವಿಷ್ಣು ಭಟ್ ಕುಂಬ್ಡಾಜೆ, ಜಿಲ್ಲಾ ಸಮಿತಿ ಸದಸ್ಯರು ಸೀತಾರಾಮ ಭಟ್ ಉಪಸ್ಥಿತರಿದ್ದರು. ಬ್ಲಾಕ್ ಸಮಿತಿ ಅಧ್ಯಕ್ಷ ಸೂರ್ಯನಾರಾಯಣ ಭಟ್ ಸ್ವಾಗತಿಸಿ, ಕಾರ್ಯದರ್ಶಿ ಕೃಷ್ಣೋಜಿರಾವ್ ಚೆಂಗಳ ವಂದಿಸಿದರು.

.jpg)
