ಕಾಸರಗೊಡು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಜಾಮೀನಿನಲ್ಲಿ ಬಿಡುಗಡೆಗೊಂಡು, ನಂತರ ತಲೆಮರೆಸಿಕೊಂಡಿದ್ದ ನೆಲ್ಲಿಕುಂಜೆ ಕಡಪ್ಪುರ ನಿವಾಸಿ ರತೀಶ್(42)ಎಂಬಾತನನ್ನು ಕಾಸರಗೋಡು ಮಹಿಳಾಠಾಣೆ ಪೊಲೀಸರು ಬಂಧಿಸಿದ್ದಾರೆ. ಠಾಣೆ ಎಸ್.ಐ ಕೆ. ಅಜಿತಾ ನೇತೃತ್ವದ ಪೊಲೀಸರ ತಂಡ ಮಲಪ್ಪುರಂನ ಕುಟ್ಟಿಪುರಂನಿಂದ ಆರೋಪಿಯನ್ನು ಸಾಹಸಕರ ರೀತಿಯಲ್ಲಿಬಂಧಿಸಿದೆ. ಕಾಸರಗೋಡು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಕಿಗೆ 2020 ಹಾಗೂ ನಂತರದ ದಿನಗಳಲ್ಲಿ ಕಿರುಕುಳ ನೀಡಿರುವ ಬಗ್ಗೆ 2021ರಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಬಂಧಿಸಲಾಗಿದ್ದು, ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡು ಹೊರಬಂದ ಬಳಿಕ ತಲೆಮರೆಸಿಕೊಂಡಿದ್ದನು.

