HEALTH TIPS

ಕೋಝಿಕೋಡ್‌ ನ ಎಲ್‌ ಡಿಎಫ್‌, ಯುಡಿಎಫ್‌ ಭದ್ರಕೋಟೆಯಲ್ಲಿ ಅರಳಿದ ಕಮಲ!

 ತಿರುವನಂತಪುರಂ: ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶದಲ್ಲಿ ಅಚ್ಚರಿಯ ಬೆಳವಣಿಗೆ ಎಂಬಂತೆ ಕೋಝಿಕೋಡ್‌ ಕಾರ್ಪೋರೇಶನ್‌ ನ ಮೇಯರ್‌ ಬೀನಾ ಫಿಲಿಪ್‌ ಅವರ ಪೊಟ್ಟಮ್ಮಾಳ್‌ ವಾರ್ಡ್‌ನಲ್ಲಿ ಬಿಜೆಪಿ ಜಯಭೇರಿ ಗಳಿಸಿದೆ.

ಪುಥಿಯಾರಾ ವಾರ್ಡ್‌ ನ ಹಾಲಿ ಕೌನ್ಸಿಲರ್‌ ಆಗಿರುವ ರೆನೀಶ್‌ ಟಿ ಎಲ್‌ ಡಿಎಫ್‌ ಅಭ್ಯರ್ಥಿಯಾಗಿ ಪೊಟ್ಟಮ್ಮಾಳ್‌ ವಾರ್ಡ್‌ ನಲ್ಲಿ ಸ್ಪರ್ಧಿಸಿ ಪರಾಜಯಗೊಂಡಿದ್ದು, ಇದು ಆಡಳಿತಾರೂಢ ಎಲ್‌ ಡಿಎಫ್‌ ಕೂಟಕ್ಕೆ ಭಾರೀ ಹಿನ್ನಡೆ ತಂದಿದೆ.

ಈ ಫಲಿತಾಂಶ ಕೋಝಿಕೋಡ್‌ ನ ರಾಜಕೀಯ ಚಿತ್ರಣವನ್ನೇ ಬದಲಾಯಿಸಿರುವುದಾಗಿ ವಿಶ್ಲೇಷಿಸಲಾಗುತ್ತಿದೆ. ಎಲ್‌ ಡಿಎಫ್‌ ಪ್ರಾಬಲ್ಯಹೊಂದಿದ್ದ ಪೊಟ್ಟಮ್ಮಾಳ್‌ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ನಗರದ ಮತದಾರರ ಒಲವು ಬದಲಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ವರದಿ ತಿಳಿಸಿದೆ.

ಕಳೆದ ಚುನಾವಣೆಯಲ್ಲಿ ಎಲ್‌ ಡಿಎಫ್‌ ಅಭ್ಯರ್ಥಿ ರೆನೀಶ್‌ ಅಂಕಥಿಲ್‌ ಅಜಯ್‌ ಕುಮಾರ್‌ ಅವರನ್ನು ಪರಾಭವಗೊಳಿಸಿದ್ದರು. ನೂತನವಾಗಿ ರಚಿಸಲಾದ ಮಾವೂರ್‌ ರಸ್ತೆ ವಾರ್ಡ್‌ ನಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಿದೆ. ಈ ವಾರ್ಡ್‌ ನಲ್ಲಿ ಕಾಂಗ್ರೆಸ್‌ ಮೇಯರ್‌ ಅಭ್ಯರ್ಥಿ ಪಿ.ಎಂ.ನಿಯಾಸ್‌ ವಿರುದ್ಧ ಬಿಜೆಪಿಯ ಶ್ರೀಜ್‌ ಸಿ ನಾಯರ್‌ ಗೆಲುವು ಸಾಧಿಸಿದ್ದಾರೆ. ಪರೋಪ್ಪಾಡಿ ವಾರ್ಡ್‌ ನಲ್ಲಿ ಬಿಜೆಪಿಯ ಹರೀಶ್‌ ಪೊಟ್ಟಾಂಗಡ್‌ ಜಯಗಳಿಸಿದ್ದಾರೆ.

ಇದಲ್ಲದೆ ಸಾಂಪ್ರದಾಯಿಕವಾಗಿ ಯುಡಿಎಫ್‌ ಭದ್ರಕೋಟೆಯಾಗಿದ್ದ ಚಲಪ್ಪುರಂ ವಾರ್ಡ್‌ ಬಿಜೆಪಿ ವಶವಾಗಿದ್ದು, ಬಿಜೆಪಿ ಅಭ್ಯರ್ಥಿ ಅನಿಲ್‌ ಕುಮಾರ್‌ ಕೆ.ಪಿ ಅವರು ಯುಡಿಎಫ್‌ ನ ವಿ ಸಂಜೀವ್‌ ಅವರನ್ನು ಸೋಲಿಸಿದ್ದಾರೆ.

ಕಳೆದ ಬಾರಿಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಚಲಪ್ಪುರಂ ವಾರ್ಡ್‌ ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪಿ.ಉಷಾದೇವಿ 113 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಈ ಫಲಿತಾಂಶವು ಕೋಝಿಕೋಡ್‌ ರಾಜಕೀಯ ಲೆಕ್ಕಾಚಾರದಲ್ಲಿ ಎಲ್‌ ಡಿಎಫ್‌ ಮತ್ತು ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಪ್ರದೇಶದಲ್ಲಿ ಬಿಜೆಪಿ ಮೇಲುಗೈ ಸಾಧಿಸಿರುವುದು ಪ್ರಮುಖ ಬೆಳವಣಿಗೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries