ತಿರುವನಂತಪುರಂ: ಚಿತ್ರ ನಿರ್ದೇಶಕ ಮತ್ತು ಸಿಪಿಎಂನ ಮಾಜಿ ಶಾಸಕ ಪಿ.ಟಿ. ಕುಂಞಮುಹಮ್ಮದ್ ಅವರು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಿರುವನಂತಪುರಂ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯವು ಸೋಮವಾರ ವರದಿ ಸಲ್ಲಿಸುವಂತೆ ಪೋಲೀಸರಿಗೆ ಸೂಚಿಸಿದೆ.
ಕುಂಞಮುಹಮ್ಮದ್ ವಿರುದ್ಧ ಚಿತ್ರ ನಟಿಯೊಬ್ಬರು ದೂರು ದಾಖಲಿಸಿದ್ದರು.
ದೂರು ದಾಖಲಿಸಿದ ಚಿತ್ರನಟಿ ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮಲಯಾಳಂ ಚಲನಚಿತ್ರಗಳನ್ನು ಆಯ್ಕೆ ಮಾಡುವ ತೀರ್ಪುಗಾರರ ಸದಸ್ಯರಾಗಿದ್ದಾರೆ. ಪಿ.ಟಿ. ಕುಂಞಮುಹಮ್ಮದ್ ಈ ತೀರ್ಪುಗಾರರ ಅಧ್ಯಕ್ಷರಾಗಿದ್ದಾರೆ. ಹೋಟೆಲ್ ಕೋಣೆಯಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಚಿತ್ರನಟಿ ದೂರು ನೀಡಿದ್ದಾರೆ. ದೂರಿಗೆ ಆಧಾರವಾಗಿರುವ ಘಟನೆ ಕಳೆದ ತಿಂಗಳು 6 ರಂದು ನಡೆದಿತ್ತು.
ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಚಲನಚಿತ್ರನಟಿ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ. ಮುಖ್ಯಮಂತ್ರಿ ಈ ದೂರನ್ನು ಕಂಟೋನ್ಮೆಂಟ್ ಪೆÇಲೀಸರಿಗೆ ರವಾನಿಸಿದ್ದರು. ಹೋಟೆಲ್ ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಮುಖ್ಯಮಂತ್ರಿಗೆ ದೂರು ನೀಡಿದ 13 ದಿನಗಳ ನಂತರ ಪ್ರಕರಣ ದಾಖಲಾಗಿರುವುದು ಟೀಕೆಗೆ ಗುರಿಯಾಗಿದೆ.

