ಕುಂಬಳೆ: ಕುಂಬಳೆ- ಮಂಜೇಶ್ವರ ರೈಲು ನಿಲ್ದಾಣಗಳ ಮಧ್ಯೆಗಿನ ಮುಟ್ಟಂ ರೈಲ್ವೇ ಕ್ರಾಸ್ ಎಲ್‍ಸಿ 287 ರೈಲ್ವೇ ಗೇಟ್ ದುರಸ್ತಿ ಕಾಮಗಾರಿಗಾಗಿ ಮುಚ್ಚುಗಡೆ ಗೊಳಿಸುವ ದಿನಾಂಕವನ್ನು ಬದಲಿಸಲಾಗಿದೆ. ಈ ಮೊದಲು ಈ ತಿಂಗಳ 15, 16ರಂದು ಮುಚ್ಚು ವುದಾಗಿ ತಿಳಿಸಿದ್ದರೂ ಈಗ ಅದನ್ನು ಈ ತಿಂಗಳ 26ರಂದು ಬೆಳಿಗ್ಗೆ 8ರಿಂದ, 27ರಂದು ಸಂಜೆ 6 ಗಂಟೆವರೆಗೆ ಮುಚ್ಚಲು ತೀರ್ಮಾ ನಿಸಲಾಗಿದೆ. ಈ ಸಂದರ್ಭದಲ್ಲಿ ಈ ದಾರಿಯಾಗಿ ವಾಹನಗಳಿಗೆ ಪ್ರವೇಶ ನಿಷೇಧಿಸಲಾಗಿದ್ದು, ವಾಹನಗಳು ಉಪ್ಪಳ ಗೇಟ್ ಮೂಲಕ ಸಂಚರಿಸಬೇಕೆಂದು ದಕ್ಷಿಣ ರೈಲ್ವೇ ಪಿಜಿಟಿ ಜಿವಿಶನ್ ಅಸಿಸ್ಟೆಂಟ್ ಇಂಜಿನಿಯರ್ ತಿಳಿಸಿದ್ದಾರೆ.
ಇದೇ ವೇಳೆ ಎಲ್‍ಸಿ 289 ಗೇಟ್‍ನಲ್ಲಿ ತುರ್ತು ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಈ ತಿಂಗಳ 17ರಂದು ಬೆಳಿಗ್ಗೆ 8ರಿಂದ 18ರಂದು ಸಂಜೆ 6 ಗಂಟೆವರೆಗೆ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಈ ದಾರಿಯಾಗಿ ಸಂಚರಿಸುವ ವಾಹನಗಳು ಎಲ್‍ಸಿ 289 ಮಂಜೇಶ್ವರ ಗೇಟ್, ಎಲ್‍ಸಿ 288 ಉಪ್ಪಳ ಗೇಟ್ ಎಂಬೀ ಲೆವೆಲ್ ಕ್ರಾಸ್ ಮೂಲಕ ಸಂಚರಿಸಬೇಕೆಂದು ಇಂಜಿನಿಯರ್ ತಿಳಿಸಿದ್ದಾರೆ.

