HEALTH TIPS

ಅಪ್ಪಾಜಿ ಸಿನಿಮಾ ಖ್ಯಾತಿಯ ನಟಿ ಆಮಣಿ ಬಿಜೆಪಿ ಸೇರ್ಪಡೆ

 ತೆಲಂಗಾಣ :ತೆಲುಗು ಜನಪ್ರಿಯ ನಟಿ ಆಮಣಿ ಅವರು ತೆಲಂಗಾಣ ಬಿಜೆಪಿ ಸೇರ್ಪಡೆಯಾಗಿದ್ದಾರೆ. ನಿನ್ನೆ ಹೈದರಾಬಾದ್‌ನಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಟಿ ಬಿಜೆಪಿ ಸೇರಿದರು.

ಈ ಕುರಿತು ತೆಲಂಗಾಣ ಬಿಜೆಪಿ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದೆ.


ಆಮಣಿ ಅವರು ಪಕ್ಷ ಸೇರ್ಪಡೆ ವೇಳೆ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ, ಪಕ್ಷದ ರಾಜ್ಯಾಧ್ಯಕ್ಷ ರಾಮಚಂದ್ರರಾವ್ ಸೇರಿದಂತೆ ಅನೇಕರು ಹಾಜರಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮೆಚ್ಚಿ ಬಿಜೆಪಿ ಸೇರಿದ್ದೇನೆ ಎಂದು ನಟಿ ಹೇಳಿಕೊಂಡಿದ್ದಾರೆ. ಅವರ ಜೊತೆ ತೆಲುಗು ಚಿತ್ರರಂಗದ ಮೇಕಪ್ ಕಲಾವಿದೆ ಶೋಭಾ ಲತಾ ಅವರೂ ಬಿಜೆಪಿ ಸೇರಿದ್ದಾರೆ.

ಬೆಂಗಳೂರು ಮೂಲದ ತೆಲುಗು ಕುಟುಂಬದ ಹಿನ್ನೆಲೆ ಹೊಂದಿರುವ ಆಮಣಿ ಅವರು ತೆಲುಗು, ತಮಿಳು, ಕನ್ನಡದ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ವಿಶೇಷ ಎಂದರೆ ಕನ್ನಡದಲ್ಲಿ 1996 ರಲ್ಲಿ ತೆರೆಕಂಡಿದ್ದ ವಿಷ್ಣುವರ್ಧನ್ ಅವರ ಅಪ್ಪಾಜಿ ಸಿನಿಮಾದಲ್ಲಿ ನಾಯಕಿಯಾಗಿ ಅಮಣಿ ಮಿಂಚಿದ್ದರು. ಬಾಳಿನ ಜ್ಯೋತಿ ಸಿನಿಮಾದಲ್ಲೂ ನಟಿಸಿದ್ದರು. ಸದ್ಯ ಹೈದರಾಬಾದ್‌ನಲ್ಲಿದ್ದುಕೊಂಡು ತೆಲುಗು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಹಾಗೂ ಧಾರಾವಾಹಿಗಳಲ್ಲಿಯೂ ನಟಿಸುತ್ತಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries