HEALTH TIPS

ಇಥಿಯೋಪಿಯಾದಲ್ಲಿ ಮೊಳಗಿದ 'ವಂದೇ ಮಾತರಂ': ಚಪ್ಪಾಳೆ ತಟ್ಟಿ ಸಂಭ್ರಮಿಸಿದ PM ಮೋದಿ

ಅಡಿಸ್‌ ಅಬಾಬಾ: ಪ್ರಧಾನಿ ಮೋದಿ ಅವರಿಗಾಗಿ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಮೂವರು ಗಾಯಕರು ವಂದೇ ಮಾತರಂ ಗೀತೆ ಗಾಯನ ಪ್ರಸ್ತುತಪಡಿಸಿದರು.

ಗಾಯಕರ ತಂಡ ವಂದೇ ಮಾತರಂ ಗೀತೆ ಹಾಡುತ್ತಿದ್ದಂತೆ ಪ್ರಧಾನಿ ಮೋದಿ ಕೈ ಎತ್ತಿ ಚಪ್ಪಾಳೆ ತಟ್ಟಿದ್ದಾರೆ.

ತಕ್ಷಣ ಅಲ್ಲಿದ್ದ ಇತರರೂ ಚಪ್ಪಾಳೆ ತಟ್ಟಿದ್ದಾರೆ.

ಇದರ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಮೋದಿ, 'ಇಥಿಯೋಪಿಯಾದ ಮೂವರು ಗಾಯಕರು ಭಾರತದ ರಾಷ್ಟ್ರೀಯ ಗೀತೆಯನ್ನು ಹೃದಯ ತುಂಬಿ ಹಾಡಿದ್ದಾರೆ. ಗೀತೆಗೆ 150 ವರ್ಷ ತುಂಬಿದ ಈ ಸಂದರ್ಭದಲ್ಲಿ ಇದು ತುಂಬಾ ಹೃದಯಸ್ಪರ್ಶಿ ಕ್ಷಣವಾಗಿತ್ತು' ಎಂದು ಬಣ್ಣಿಸಿದ್ದಾರೆ.' ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿ ಮೋದಿಯವರು ನಾಲ್ಕು ದಿನಗಳ ಮೂರು ದೇಶಗಳ ಭೇಟಿ ಕೈಗೊಂಡಿದ್ದಾರೆ.

ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರು ರಚಿಸಿರುವ 'ವಂದೇ ಮಾತರಂ' ಗೀತೆಗೆ 150 ವರ್ಷ ತುಂಬಿದ ಕಾರಣ ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ ಪ್ರಧಾನಿ ನರೇಂದ್ರ ಮೋದಿಯವರು, 'ವಂದೇ ಮಾತರಂಗೆ ನೂರು ವರ್ಷವಾದಾಗ, ಸಂವಿಧಾನವನ್ನು ಉಸಿರುಗಟ್ಟಿಸಲಾಗಿತ್ತು. ದೇಶವನ್ನು ತುರ್ತು ಪರಿಸ್ಥಿತಿಯಲ್ಲಿ ಬಂಧಿಸಲಾಗಿತ್ತು ತುಷ್ಟೀಕರಣ ರಾಜಕಾರಣಕ್ಕಾಗಿ ಕಾಂಗ್ರೆಸ್‌ ಪಕ್ಷವು ಗೀತೆಯನ್ನು ಕೇವಲ ಎರಡು ಚರಣಗಳಿಗೆ ಇಳಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದರು. ಜತೆಗೆ ಈಗ ಗೀತೆಗೆ 150 ವರ್ಷ ತುಂಬಿದ ಸಂದರ್ಭಕ್ಕೆ ಸಾಕ್ಷಿಯಾಗುತ್ತಿರುವುದು ನಮ್ಮ ಹೆಮ್ಮೆ ಎಂದಿದ್ದರು.

ಈ ಗೀತೆ ಈಗಲೂ ರಾಜಕಾರಣದ ಹುದಲಿನಲ್ಲಿ ಸಿಲುಕಿ ವಿವಾದವನ್ನು ಸೃಷ್ಟಿಸುತ್ತಲೇ ಇದೆ. ಇದರ ನಡುವೆ ಇಥಿಯೋಪಿಯಾದಲ್ಲಿ ಅಲ್ಲಿಯ ಗಾಯಕರು ವಂದೇ ಮಾತರಂ ಗೀತೆ ಹಾಡಿರುವುದು ವಿಶೇಷ ಎನಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries