HEALTH TIPS

ಬಾಲಕಿಗೆ ಲೈಂಗಿಕ ಕಿರುಕುಳ-ಮದ್ರಸಾ ಶಿಕ್ಷಕಗೆ 14 ವರ್ಷ ಕಠಿಣ ಜೈಲು ಶಿಕ್ಷೆ, ದಂಡ

ಕಾಸರಗೋಡು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಮದ್ರಸಾ ಶಿಕ್ಷಕ, ಕುಂಬಳೆ ಪೊಲೀಸ್ ಆಣೆ ವ್ಯಾಪ್ತಿಯ ಕಿದೂರು ಬಜಪ್ಪೆಕಡವು ಹೌಸ್‍ನ ಎ. ಅಬ್ದುಲ್ ಹಮೀದ್‍ಗೆ ಹೊಸದುರ್ಗ ಪೋಕ್ಸೋ ನ್ಯಾಯಾಲಯ 14ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 40ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದಿದ್ದಲ್ಲಿ ಅಪರಾಧಿ ಹದಿನೈದು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ. 

ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ 12ರ ಹರೆಯದ ಬಾಲಕಿಗೆ 2023 ನವೆಂಬರ್ ತಿಂಗಳಲ್ಲಿ ಹಲವುಬಾರಿ ಮದ್ರಸಾ ಕೊಠಡಿಯೊಳಗೆ ಲೈಂಗಿಕ ಕಿರುಕುಳನೀಡಿರುವ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries